🙏🙏 **ಸರ್ಕಾರಿ ಪ್ರೌಢಶಾಲೆ ಅಂಕನಹಳ್ಳಿಯ ಶೈಕ್ಷಣಿಕ ಜಾಲತಾಣಕ್ಕೆ ಆತ್ಮೀಯ ಸ್ವಾಗತ.**🙏🙏

Thursday, 30 November 2023

10 ನೆಯ ತರಗತಿ ಸಮಾಜ ವಿಜ್ಞಾನ ಅಭ್ಯಾಸದ ಹಾಳೆಗಳು

10 ನೆಯ ತರಗತಿ ತೃತೀಯ ಭಾಷೆ ಹಿಂದಿ ಅಭ್ಯಾಸದ ಹಾಳೆಗಳು

10 ನೆಯ ತರಗತಿ ಗಣಿತ ಅಭ್ಯಾಸದ ಹಾಳೆಗಳು

10 ನೆಯ ತರಗತಿ ವಿಜ್ಞಾನ ಅಭ್ಯಾಸದ ಹಾಳೆಗಳು

10 ನೆಯ ತರಗತಿ ದ್ವಿತೀಯ ಭಾಷೆ ಇಂಗ್ಲೀಷ್‌ ಅಭ್ಯಾಸದ ಹಾಳೆಗಳು

ಅರ್ಥವಿಲ್ಲದ ಸಿನಿಮಾ ಹಾಡುಗಳ ಬದಲು ಬದುಕಿಗೆ ದಾರಿ ತೋರಿಸುವ ಕೀರ್ತನೆಗಳ ಕಲಿಕೆ ಆರೋಗ್ಯಕರ.

   ಕನಕದಾಸ ಜಯಂತಿ.                                                                  30-11-2023


ದಾಸ ಶ್ರೇಷ್ಠರ ಕೀರ್ತನೆಗಳು ಬದುಕಿಗೆ ದಾರಿ  ತೋರಿಸುವ ದೀವಿಗೆಗಳಂತಿದ್ದು ಜೀವನದ ಕೆಲವು ಕ್ಲಿಷ್ಠ ಸಂದರ್ಭಗಳಲ್ಲಿ ಸೂಕ್ತ ನಿರ್ಧಾರಕ್ಕೆ ಮಾರ್ಗದರ್ಶನ ಮಾಡುತ್ತವೆ ಎಂದು ಶಾಲೆಯ ಮುಖ್ಯಶಿಕ್ಷರಾದ ಶ್ರೀಯುತ ಸೋಮಶೆಖರ್‌ ರವರು ದಿನಾಂಕ 30-11-2023 ರಂದು ಕನಕದಾಸ ಜಯಂತಿ ಕಾರ್ಯಕ್ರಮದ ಅಧ್ಯಕ್ಷೀಯ ಭಾಷಣದಲ್ಲಿ ಅಭಿಪ್ರಾಯ ಪಟ್ಟರು.

ಶಾಲೆಯಲ್ಲಿ ಕನಕದಾಸರ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

ಹತ್ತನೆಯ ತರಗತಿಯ ವಿದ್ಯಾರ್ಥಿನಿಯರ ದೈವತಾ ಸ್ತುತಿಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆದೊರಕಿತು.ಕಾರ್ಯಕ್ರಮದ ನಿರೂಪಣೆಯಿಂದ ವಂದನಾರ್ಪಣೆವರೆಗೆ ವಿದ್ಯಾರ್ಥಿಗಳೆ ನಿರ್ವಹಿಸಿದ್ದು ವಿಶೇಷವಾಗಿತ್ತು.

ಕನಕದಾಸ ಜಯಂತಿಯ ಆಚರಣೆ, ಉದ್ದೇಶ,ಕನಕರ ಜೀವನ ಚರಿತ್ರೆ,ಬಾಲ್ಯ, ತಿಮ್ಮಪ್ಪನಾಯಕರು,ಕನಕನಾಯಕ ಹಾಗೂ ಕನಕದಾಸರಾದ ಬಗೆ,ಅವರ ಕೀರ್ತನೆಗಳು ,ಸಾಹಿತ್ಯ ಕೃತಿಗಳನ್ನು ವಿದ್ಯಾರ್ಥಿಗಳಾದ ಗೌತಮ್‌,ಮನೋಜ್‌,ಪಲ್ಲವಿ,ಚಿನ್ನು,ಚಂದ್ರಶೇಖರ್‌,ಧನುಷ್‌ ಮುಂತಾದ ವಿದ್ಯಾರ್ಥಿಗಳು ವಿವರಣಾತ್ಮಕವಾಗಿ ತಿಳಿಸಿಕೊಟ್ಟರು.


ಶಾಲೆಯ ಶಿಕ್ಷಕರಾದ ಶ್ರೀಯುತ ರಾಜು ಸಿ.ಎಸ್‌, ಮಂಜುನಾಥ.ಎಲ್.‌ ಈ. ಶಿವಕುಮಾರ್.ಡಿ.ಎಸ್.‌ ಮತ್ತು ಸಾಗರ್.ಸಿ.ಎಸ್.ರವರು ಹಾಗೂ ಪ್ರಥಮದರ್ಜೆ ಸಹಾಯಕರಾದ ಹರೀಶ್‌ ಮತ್ತು ಕಛೇರಿ ಸಹಾಯಕರಾದ ದಯಾನಂದ್‌ ರವರು ಹಾಜರಿದ್ದು ಕನಕದಾಸರ ಕೃತಿಗಳ ರಚನೆ,ಒಳಗೊಂಡಿರುವ ಸಾಹಿತ್ಯಿಕ ಅಂಶಗಳು,ಪರಿಚಯಿಸಿ ಕನಕದಾಸರ ಕೀರ್ತನೆಗಳ ಮಹತ್ವ ತಿಳಿಸಿಕೊಟ್ಟರು.

                          

8ನೆಯ ತರಗತಿಯ ವಿದ್ಯಾರ್ಥಿನಿಯರು ಕಾರ್ಯಕ್ರಮದ ಉದ್ದಕ್ಕೂ ಕನಕರ ಕೀರ್ತನೆಗಳನ್ನು ಪ್ರಸ್ತುತಪಡಿಸಿದ್ದು ಕಾರ್ಯಕ್ರಮಕ್ಕೆ ಮೆರಗು ನೀಡಿತು.ವಿದ್ಯಾರ್ಥಿಗಳು ವಾಚಿಸಿದ ಕೀರ್ತನೆಗಳನ್ನು ಧ್ವನಿಸುರುಳಿಗಳ ಮೂಲಕ ಎಲ್ಲರಿಗೂ ಕೇಳಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಲೆಯ ಮುಖ್ಯಶಿಕ್ಷಕರು 12 ನೆಯ ಶತಮಾನದ ವಚನ ಸಾಹಿತ್ಯ ಹಾಗೂ 15 ನೆಯ ಶತಮಾನದ ದಾಸಸಾಹಿತ್ಯ ಪರಂಪರೆಗಳು ಕನ್ನಡ ಸಾಹಿತ್ಯಕ್ಷೇತ್ರದಲ್ಲಿ ಗಣನೀಯ ಪಾತ್ರವಹಿಸುತ್ತವೆ.ಎಂದು ತಿಳಿಸಿದರು. ಈ ಎರಡು ಪರಂಪರೆಗಳು ಜನ ಸಾಮಾನ್ಯರಿಗೂ ತಲುಪುವಂತೆ ವಚನ ಕಾರರ ಮತ್ತು ದಾಸರುಗಳ ತಮ್ಮಸಾಹಿತ್ಯರಚನೆಗಳಿದ್ದವು.

ಕೀರ್ತನೆಗಳು ಅರ್ಥಪೂರ್ಣ ರಚನೆಗಳಾಗಿದ್ದು ವಿದ್ಯಾರ್ಥಿಗಳು ಅನರ್ಥ ಸೃಷ್ಟಿಸುವ ಸಿನಿಮಾ ಹಾಡುಗಳನ್ನು ಕಲಿಯುವ ಬದಲು ಕೀರ್ತನೆಗಳನ್ನು ಆಳಿಸಿ ಕಲಿಯುವುದರಿಂದ ಶೈಕ್ಷಣಿಕವಾಗಿಯೂ ಉಪಯುಕ್ತವಾಗಿವೆ ಎಂದು ಮಾರ್ಗದರ್ಶನ ಮಾಡಿದರು.

10 ನೆಯ ತರಗತಿಯ ವಿದ್ಯಾರ್ಥಿ ರಾಹುಲ್‌ ಕಾರ್ಯಕ್ರಮ ನಿರೂಪಿಸಿ 9ನೆಯ ತರಗತಿಯ ವೇದಾವತಿ ಎಲ್ಲರಿಗೂ ಧನ್ಯವಾದ ಸಮರ್ಪಿಸಿದರು.


 

Monday, 27 November 2023

ಸಂವಿಧಾನ ದಿನ , ದಿನಾಂಕ 27/11/2023.

 ಸಂವಿಧಾನ ದಿನ , ದಿನಾಂಕ 27/11/2023.

ಸರ್ಕಾರಿ ಪ್ರೌಢ ಶಾಲೆ ಅಂಕನಹಳ್ಳಿ (ಚುಂ) ಸಾಲಿಗ್ರಾಮ ತಾಲೂಕು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮೈಸೂರುರವರ ಪತ್ರ ಸಂಖ್ಯೆ:ಜಿಕಾಸೇಪ್ರಾ/ಮೈ/862/2023 ದಿನಾಂಕ20/11/2023ರ ಅನ್ವಯ 

ದಿನಾಂಕ 27/11/2023ರಂದು ಶಾಲೆಯಲ್ಲಿ ಸಂವಿಧಾನ ದಿನದ ಪ್ರಯುಕ್ತ ವಿದ್ಯಾರ್ಥಿಗಳಿಗೆ ಸಂವಿಧಾನ ಪೀಠಿಕೆ ಓದಿಸಿ ಮೂಲಭೂತ ಹಕ್ಕುಗಳ ಮತ್ತು ಕರ್ತವ್ಯಗಳ ಬಗ್ಗೆ ಸಂಕ್ಷಿಪ್ತವಾಗಿ ತಿಳಿಸಲಾಯಿತು.

ವಿದ್ಯಾರ್ಥಿಗಳಿಗೆ ಸಂವಿಧಾನ ಪೀಠಿಕೆ ಓದಿಸಿ ಮೂಲಭೂತ ಹಕ್ಕುಗಳ ಮತ್ತು ಕರ್ತವ್ಯಗಳ ಬಗ್ಗೆ ಸಂಕ್ಷಿಪ್ತವಾಗಿ ತಿಳಿಸಲಾಯಿತು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಮುಖ್ಯಶಿಕ್ಷಕರಾದ ಶ್ರೀಯುತ ಸೋಮಶೇಖರ್ ರವರು ವಹಿಸಿದ್ದರು.

ನಮ್ಮ ಶಾಲೆಯ ವಿದ್ಯಾರ್ಥಿಗಳಾದ ಗೌತಮ್ , ಮನೋಜ್ , ಕೃತಿಕಾ , ಪ್ರೀತು , ವೇದಾವತಿ ಹಾಗೂ ತ್ರಿವೇಣಿ ರವರು ಸಂವಿಧಾನ ದಿನ ಕುರಿತು ಭಾಷಣ ಮಾಡಿದರು

ಶಾಲೆಯ ವಿಜ್ಞಾನ ಶಿಕ್ಷಕರಾದ ಶ್ರೀಯುತ ಶಿವಕುಮಾರ್ ಡಿ ಎಸ್ ರವರು ಸಂವಿಧಾನ ದಿನದ ಕುರಿತು ಭಾಷಣ ಮಾಡಿದರು.

ಸಮಾಜ ವಿಜ್ಞಾನ ಶಿಕ್ಷಕರಾದ ಶ್ರೀಯುತ ಸಾಗರ್ ರವರು ಸಂವಿಧಾನದ ದಿನ , ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳ ಬಗ್ಗೆ ಕುರಿತು ಮಾತನಾಡಿದರು.

ಸಂವಿಧಾನ ದಿನದ ಕಾರ್ಯಕ್ರಮ ಅಧ್ಯಕ್ಷತೆ  ವಹಿಸಿ ಮಾತನಾಡಿದ ಮುಖ್ಯ ಶಿಕ್ಷಕರಾದ ಶ್ರೀಯುತ ಸೋಮಶೇಖರ್ ರವರು ಸಂವಿಧಾನ ದಿನದ ಮಹತ್ವ , ಸಂವಿಧಾನದ ರಚನೆ , ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳ ಬಗ್ಗೆ ತಿಳಿಸಿದರು.

ಕಾರ್ಯಕ್ರಮದಲ್ಲಿ ಶಿಕ್ಷಕರಾದ ಶ್ರೀಯುತ ರಾಜು ಸಿ ಎಸ್ ರವರು ಹಾಗೂ ಸಿಬ್ಬಂದಿ ದಯಾನಂದರವರು ಉಪಸ್ಥಿತರಿದ್ದರು.

ನಮ್ಮ ಶಾಲೆಯ ವಿದ್ಯಾರ್ಥಿನಿಯರಾದ ಸಿಂಚನರವರು ಕಾರ್ಯಕ್ರಮದ ಕುರಿತು ನಿರೂಪಣೆ ಮಾಡಿದರು ಪ್ರೀತುರವರು ಸ್ವಾಗತ ಕೋರಿದರು ಮಾನ್ಯರವರ ವಂದನಾರ್ಪಣೆ ಮಾಡಿದರು.

ENGLISH PASSING PACKAGE -2

ENGLISH PASSING PACKAGE -1

Thursday, 16 November 2023

ಹುಟ್ಟುಹಬ್ಬದಂದು ಮಕ್ಕಳಿಗೆ ಲೋಟಗಳ ವಿತರಣೆ

 ನಮ್ಮ ಶಾಲೆಯ ಕಛೇರಿ ಸಹಾಯಕ ರಾದ ಶ್ರೀಯುತ ದಯಾನಂದಕುಮಾರ್ ರವರು ತಮ್ಮ ಹುಟ್ಟುಹಬ್ಬದ ಪ್ರಯುಕ್ತ ಶಾಲೆಯ 8,9 ಮತ್ತು 10 ನೆಯ ತರಗತಿಗಳ ಎಲ್ಲಾ ಮಕ್ಕಳಿಗೆ ಸ್ಟೀಲ್ ಲೋಟಗಳನ್ನು ವಿತರಣೆ ಮಾಡಿದರು.

ಶ್ರೀಯುತರಿಗೆ ದೇವರು ಆಯಸ್ಸು, ಆರೋಗ್ಯ ,ಸಮೃದ್ಧಿಗಳನ್ನು ಕರುಣಿಸಲಿ ಎಂದು ವಿದ್ಯಾರ್ಥಿಗಳ ಹಾಗೂ ಶಿಕ್ಷಕರ ಮತ್ತು ಸಿಬ್ಬಂದಿ ಗಳ ಹಾರೈಕೆ.




Wednesday, 15 November 2023

ಮಕ್ಕಳ ದಿನಾಚರಣೆ 2023

ವಿದ್ಯಾರ್ಥಿಗಳು ಮೂರು ರೀತಿಯ ಮೌಲ್ಯಗಳನ್ನು ಅಳವಡಿಸಿಕೊಂಡರೆ  ಅದೇ ರಾಷ್ಟ್ರಕ್ಕೆ ಅಪರಿಮಿತ ಕೊಡುಗೆ

ದಿನಾಂಕ 15-11-2023 ರಂದುಚುಂಚನಕಟ್ಟೆ ಹೋಬಳಿ ಸಾಳಿಗ್ರಾಮ ತಾಲ್ಲೂಕಿನ ಸರ್ಕಾರಿ ಪ್ರೌಢಶಾಲೆ ಅಂಕನಹಳ್ಳಿಯಲ್ಲಿ  ಆಚರಿಸಿದ ಮಕ್ಕಳ ದಿನಾಚರಣೆ ಸಂದರ್ಭದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲೆಯ ಮುಖ್ಯಶಿಕ್ಷರಾದ ಶ್ರೀಯುತ ಎಸ್‌  ಸೋಮಶೇಖರ್‌ ರವರು ಅಭಿಪಾರಯಪಟ್ಟರು.

ದಿನಾಂಕ 15-11-2023 ರಂದು ಮಕ್ಕಳ ದಿನಾಚರಣೆಯನ್ನು  ಶಾಲೆಯಲ್ಲಿ ಬಹಳ     ಅರ್ಥಪೂರ್ಣ ಹಾಗೂ ಸಡಗರದಿಂದ ಆಚರಿಸಲಾಯಿತು.
ದಿನದ ಮೊದಲಿಗೆ ಮಕ್ಕಳಿಗೆ ಮನರಂಜನಾತ್ಮಕ ಹಾಗೂ ಕೆಲವು ಉಪಯುಕ್ತ ಮೌಲ್ಯಗಳನ್ನು ಉಣಬಡಿಸುವ ಆಟಗಳನ್ನು ಆಡಿಸಲಾಯಿತು.
ಆಟದಲ್ಲಿ ಮಕ್ಕಳ ಭಾಗವಹಿಸುವಿಕೆಯ ವೀಡಿಯೋ ತುಣುಕು

ವೇದಿಕೆ ಕಾರ್ಯಕ್ರಮ ದ ಅಧ್ಯಕ್ಷತೆಯನ್ನು ಶಾಲಾ ಮುಖ್ಯಶಿಕ್ಷಕರಾದ ಶ್ರೀಯುತ ಎಸ್ ಸೋಮಶೇಖರ್ ರವರು ವಹಿಸಿದ್ದರು.

ಕನ್ನಡ ಭಾಷಾ ಶಿಕ್ಷಕರಾದ ಶ್ರೀಯುತ ಎಲ್.ಈ .ಮಂಜುನಾಥ್ ರವರ ದೈವಸ್ತುತಿಯೊಂದಿಗೆ ವೇದಿಕೆ ಕಾರ್ಯ ಕ್ರಮಕ್ಕೆ ಚಾಲನೆ ನೀಡಲಾಯಿತು.ಸಾಗರ್ ಸರ್ ರವರು ಎಲ್ಲರನ್ನು ಆತ್ಮೀಯವಾಗಿ ಸ್ವಾಗತಿಸಿದರು.
ಶಾಲೆಯ ಹಿರಿಯ ಶಿಕ್ಷಕರಾದ ಶ್ರೀಯುತ ಸಿ.ಎಸ್. ರಾಜು ರವರು ಎಲ್ಲಾ ಮಕ್ಕಳಿಗೆ ಮಕ್ಕಳ ದಿನಾಚರಣೆ ಯ ಶುಭಾಶಯ ಗಳನ್ನು ತಿಳಿಸಿದರು.

ಕಾರ್ಯಕ್ರಮದಲ್ಲಿ ಸಮಾಜವಿಜ್ಞಾನ ಶಿಕ್ಷಕರಾದ ಶ್ರೀಯುತ ಸಾಗರ್ ರವರು ಮಾತನಾಡಿ ಮಕ್ಕಳ ದಿನಾಚರಣೆಯ ಹಿನ್ನಲೆ, ಉದ್ದೇಶ ಮತ್ತು ಆಚರಣೆಯ ಮಹತ್ವವನ್ನು ತಿಳಿಸಿಕೊಟ್ಟರು.
ಕನ್ನಡ ಭಾಷಾ ಶಿಕ್ಷಕರಾದ ಶ್ರೀಯುತ ಎಲ್.ಈ. ಮಂಜುನಾಥ್ ರವರು ಮಕ್ಕಳಿಗೆ ಶುಭಾಶಯ ಕೋರಿ ಇಂದಿನ ಮಕ್ಕಳೆ ಮುಂದಿನ ಪ್ರಜೆಗಳು ನೀವೆಲ್ಲರೂ ಉತ್ತಮ ಪ್ರಜೆಗಳಾದರೆ ಸಾಕು ರಾಷ್ಟ್ರಕ್ಕೆ ಅಪರಿಮಿತ ಕೊಡುಗೆ ಕೊಟ್ಟಂತಾಗುತ್ತದೆ ಎಂದು ಅಭಿಪ್ರಾಯ ಪಟ್ಟರು.

ಕಾರ್ಯಕ್ರಮ ದ ಅಧ್ಯಕ್ಷೀಯ ಭಾಷಣ ಮಾಡಿದ ಮುಖ್ಯಗುರುಗಳು ಇಂದಿನ ಯುವಪೀಳಿಗೆ ಮೂರು ಮೌಲ್ಯಗಳಾದ ವೈಯಕ್ತಿಕ ಮೌಲ್ಯ,ಸಾಮಾಜಿಕ ಮೌಲ್ಯ,ಮತ್ತು ರಾಷ್ಟ್ರೀಯ ಮೌಲ್ಯ ಗಳನ್ನು ಅಳವಡಿಸಿಕೊಂಡರೆ ವೈಯಕ್ತಿಕ ಜೀವನ ಹಾಗೂ ರಾಷ್ಟ್ರದ ಅಭಿವೃದ್ಧಿ ಎರಡಕ್ಕೂ ಪೂರಕ ವಾಗುತ್ತದೆ. ಆ ಮೌಲ್ಯಗಳನ್ನು ಶಾಲಾ ಜೀವನದ ಅವಧಿಯಲ್ಲಿಯೇ ರೂಢಿಸಿಕೊಳ್ಳಬೇಕೆಂದು ಹಿತವಚನ ಹೇಳಿದರು.
ವಿವಿಧ ಮನರಂಜನಾ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಹಾಗೂ ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೆ ಕಿರುಕಾಣಿಕೆ ನೀಡಲಾಯಿತು.














ವಿಜ್ಞಾನ ಶಿಕ್ಷಕರಾದ ಶ್ರೀಯುತ ಡಿ.ಶಿವಕುಮಾರ್ ರವರು ಕಾರ್ಯಕ್ರಮವನ್ನು ನಿರೂಪಿಸಿ ಭಾಗವಹಿಸಿದ ಎಲ್ಲರಿಗೆ ಧನ್ಯವಾದಗಳನ್ನು ಸಮರ್ಪಿಸಿದ ರು.
ಕಾರ್ಯಕ್ರದ ಕೊನೆಯಲ್ಲಿ ವಿವಿಧ ಹಾಡುಗಳಿಗೆ ನರ್ತಿಸುವ ಮೂಲಕ ಮಕ್ಕಳು ಆನಂದಿಸಿದರು.







.
 

Wednesday, 8 November 2023

ಬಾಲ್ಯ ವಿವಾಹ ಮುಕ್ತ ಕರ್ನಾಟಕ ಅಭಿಯಾನ ದಿನಾಂಕ : 09/11/2023

         ಸರ್ಕಾರಿ ಪ್ರೌಢಶಾಲೆ ಅಂಕನಹಳ್ಳಿ ಚುಂಚನಕಟ್ಟೆ ಹೋಬಳಿ ಸಾಲಿಗ್ರಾಮ ತಾಲೂಕು 


ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ , ಮೈಸೂರು ರವರ ಪ .ಸಂ : ಜಿಕಾಸೇಪ್ರಾ/ಮೈ/781/2023  ದಿನಾಂಕ : 31/10/2023 ರ ಅನ್ವಯ ದಿನಾಂಕ 09/11/2023 ರಂದು ಶಾಲೆಯಲ್ಲಿ ರಾಷ್ಟ್ರೀಯ ಕಾನೂನು ಸೇವೆಗಳ  ದಿನಾಚರಣೆ ಪ್ರಯುಕ್ತ ಶಾಲೆಯಲ್ಲಿ ಬಾಲ್ಯ ವಿವಾಹ ಮುಕ್ತ ಕರ್ನಾಟಕ ಅಭಿಯಾನ ಪ್ರಯುಕ್ತ ಬೆಳಗಿನ ಪ್ರಾರ್ಥನಾ ಅವಧಿಯಲ್ಲಿ ಮುಖ್ಯ  ಶಿಕ್ಷಕರು ಮತ್ತು ಶಿಕ್ಷಕರು , ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳು ಒಡಗೂಡಿ ಪ್ರತಿಜ್ಞೆ ಕೈಗೂಳ್ಳಲಾಯಿತು


ಪ್ರತಿಜ್ಞೆ ಕೈಗೊಳ್ಳುತ್ತಿರುವ ವೀಡಿಯೋ

ನಂತರ ವಿದ್ಯಾರ್ಥಿಗಳಿಗೆ ಬಾಲ್ಯವಿವಾಹ,ಪರಿಣಾಮ ,ತಡೆಗಟ್ಟುವಲ್ಲಿ ನಮ್ಮ ಪಾತ್ರ ವಿಷಯ ಕುರಿತು ವಿಚಾರಗೋಷ್ಠಿ /ಉಪನ್ಯಾಸ  ಏರ್ಪಡಿಸಲಾಗಿತ್ತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಮುಖ್ಯಶಿಕ್ಷಕರಾದ ಶ್ರೀಯುತ ಸೋಮಶೇಖರ್ ರವರು ವಹಿಸಿದ್ದರು.

ಶಾಲೆಯ ವಿಜ್ಞಾನ ಶಿಕ್ಷಕರಾದ ಶ್ರೀಯುತ ಶಿವಕುಮಾರ್ ಡಿ.ಎಸ್ ರವರು ಬಾಲ್ಯವಿವಾಹ ಎಂದರೇನು? ಬಾಲ್ಯವಿವಾಹಕ್ಕೆಕಾರಣಗಳ,ಬಾಲ್ಯವಿವಾಹದಿಂದಾಗುವ ದುಷ್ಪರಿಣಾಮಗಳು ಹಾಗೂ ಬಾಲ್ಯವಿವಾಹ ತಡೆಗಟ್ಟುವ ಕ್ರಮಗಳು ಹಾಗೂ ಬಾಲ್ಯವಿವಾಹ ತಡೆಯುವಲ್ಲಿ ನಮ್ಮೆಲ್ಲರ ಪಾತ್ರದ ಬಗ್ಗೆ ಉಪನ್ಯಾಸ ನೀಡಿದರು.



ಶಾಲೆಯ ಸಮಾಜವಿಜ್ಞಾನ ಶಿಕ್ಷಕರಾದ ಶ್ರೀಯುತ ಸಾಗರ್ ರವರು ಬಾಲ್ಯವಿವಾಹ ನಿಷೇದ ಕಾಯಿದೆಯ ಜಾರಿ,ತಿದ್ದುಪಡಿ,ಮತ್ತು ಮಹತ್ವವನ್ನು ತಿಳಿಸಿದರಲ್ಲದೆ, ಬಾಲ್ಯವಿವಾಹವನ್ನು ತಡೆಯುವಲ್ಲಿ ವಿದ್ಯಾರ್ಥಿಗಳು ವಹಿಸಬೇಕಾದ ಜಾಗೃತಿಯ ಬಗ್ಗೆ ಮನವರಿಕೆ ಮಾಡಿಕೊಟ್ಟರು.

ಕಾರ್ಯಕ್ರಮದ ಅದ್ಯಕ್ಷತೆ ವಹಿಸಿ ಮಾತನಾಡಿದ ಮುಖ್ಯಶಿಕ್ಷಕರಾದ ಸೋಮಶೇಖರ್ ರವರು ಮಾತನಾಡಿ ಬಾಲ್ಯವಿವಾಹ ಮಕ್ಕಳ ಹಕ್ಕುಗಳನ್ನು ಕಸಿಯುವುದಲ್ಲದೆ,ಹಕ್ಕು ಮತ್ತು ಕಾನೂನಿನ ಉಲ್ಲಂಘನೆ ಯಾಗುತ್ತದೆ. ಮದುವೆಯ ನಿರ್ದಿಷ್ಟ ವಯಸ್ಸಿಗಿಂತ ಮೊದಲು ಮದುವೆ ಮಾಡುವುದರಿಂದ ಆರೋಗ್ಯ ವಂತ ಸಮಾಜ ನಿರ್ಮಾಣ ಅಸಾಧ್ಯವೆಂದು ಮನವರಿಕೆ ಮಾಡಿಕೊಟ್ಟರು.ಬಾಲ್ಯವಿವಾಹದಿಂದ ಉಂಟಾಗುವ ಕೌಟುಂಬಿಕ,ಸಾಮಾಜಿಕ ತೊಂದರೆಗಳನ್ನು ಬಿಚ್ಚಿಟ್ಟರು.ಅಲ್ಲದೆ ವಿದ್ಯಾರ್ಥಿಗಳು ಎಚ್ಚರ ವಹಿಸಿ ಸಂಬಂದಿಸಿದ ಪ್ರಾಧಿಕಾರ ಗಳಿಗೆ ಅಧಿಕಾರಿಗಳಿಗೆ ತಿಳಿಸುವ ಪ್ರಯತ್ನ ಮಾಡಬೇಕು ಎಂದು ತಿಳಸಿದರು.
ಕಾರ್ಯಕ್ರಮ ದಲ್ಲಿ ಶಿಕ್ಷಕರಾದ ಶ್ರೀಯುತ ಸಿ.ಎಸ್ ರಾಜುರವರು ,ಶ್ರೀಯುತ ಸೋಮೇಶಿಯವರು ಪ್ರಥಮದರ್ಜೆ ಸಹಾಯಕರಾದ ಹರೀಶ್ ಹಾಗೂ ಸಿಬ್ಬಂದಿ ದಯಾನಂದ ಉಪಸ್ಥಿತರಿದ್ದರು.
ಶ್ರೀಯುತ ಮಂಜುನಾಥ್ ಎಲ್.ಈ. ಕಾರ್ಯಕ್ರಮ ನಿರೂಪಣೆ ಮಾಡಿ ವಂದಿಸಿದರು.


Monday, 11 September 2023

ಶಿಕ್ಷಕರ ದಿನಾಚರಣೆ2023 ಹಾಗೂ ಬೀಳ್ಕೊಡುಗೆ ಸಮಾರಂಭ

ಶಿಕ್ಷಕರ ದಿನಾಚರಣೆ 2023 ಹಾಗೂ ಬೀಳ್ಕೊಡುಗೆ ಸಮಾರಂಭ  ದಿನಾಂಕ 11-09-2023

ದಿನಾಂಕ 11-09-2023 ರ ಸೋಮವಾರದಂದು ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ 2023, ವರ್ಗಾವಣೆಗೊಂಡ ಶಿಕ್ಷಕರಿಗೆ ಬೀಳ್ಕೊಡುಗೆ ,ಹಾಗೂ 2023-24 ನೆಯ ಸಾಲಿನ ಮೈಸೂರು  ಜಿಲ್ಲಾಮಟ್ಟದ ಉತ್ತಮ ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಮುಖ್ಯೋಪಾದ್ಯಾಯರಾದ ಶ್ರೀಯುತ ಸೋಮಶೇಖರ್‌ ರವರು ವಹಿಸಿಕೊಂಡಿದ್ದರು. 
ವಿದ್ಯಾರ್ಥಿಗಳ ಪ್ರಾರ್ಥನೆಯೊಂದಿಗೆ ಚಾಲನೆಗೊಂಡು  ವಿಜ್ಞಾನ ಶಿಕ್ಷಕರಾದ ಶ್ರೀಯುತ ಡಿ.ಶಿವಕುಮಾರ್‌ ರವರು ಎಲ್ಲರನ್ನೂ ಆತ್ಮೀಯವಾಗಿ ಸ್ವಾಗತಿಸಿದರು.


                                                                                     

                               
                                                                                                  

 ಕಾರ್ಯಕ್ರಮದಲ್ಲಿ ಪ್ರಸ್ತುತ ವರ್ಷ ಹೆಚ್ಚುವರಿ ವರ್ಗಾವಣೆಯಲ್ಲಿ ಕೆ.ಆರ್.ನಗರ ತಾಲ್ಲೂಕಿನ ಮಾವತ್ತೂರು ಶಾಲೆಗೆ ವರ್ಗಾವಣೆಗೊಂಡ ಶ್ರೀಯುತ ಎನ್.ಸಿ. ಪ್ರಕಾಶ್‌, ಮೈಸೂರಿನ ಆದರ್ಶ ವಿದ್ಯಾಲಯಕ್ಕೆ ವರ್ಗಾವಣೆಗೊಂಡ ಶ್ರೀಯುತ ಎಸ್.ಆರ್. ರಾಮಚಂದ್ರ, ಹಾಗೂ ಹಾಸನ ಜಿಲ್ಲೆಯ ಗಿಡ್ಡೇನಹಳ್ಳಿ ಪ್ರೌಢಶಾಲೆಗೆ ವರ್ಗಾವಣೆಗೊಂಡ ಶಾಹಿನ್ ಬಾನು ರವರನ್ನು ಆತ್ಮೀಯವಾಗಿ ಸ್ವಾಗತಿಸಲಾಯಿತು.





ಸನ್ಮಾನಿತರಿಗೆ ಶಾಲೆಯ ಸುಂದರ ಉದ್ಯಾನದ ಚಿತ್ರವುಳ್ಳ ನೆನಪಿನ ಕಾಣಿಕೆ ನೀಡಿ ಶಾಲೆಯಲ್ಲಿ ಶಿಕ್ಷಕರ ಕರ್ತವ್ಯದ ದಿನಗಳ ನೆನಪು ಚಿರವಾಗಿರುವಂತೆ ಶುಭಕೋರಿದ್ದು ವಿಶೇಷವಾಗಿತ್ತು.

2023-24 ನೆಯ ಸಾಲಿನ ಮೈಸೂರು ಜಿಲ್ಲೆ ಉತ್ತಮ ಶಿಕ್ಷಕ ಪ್ರಸಶ್ತಿ ಪುರಸ್ಕೃತರಾದ ಶ್ರೀಯುತ ಎಲ್.‌ ಈ ಮಂಜುನಾಥ್‌ ರವರನ್ನು ಶಾಲೆಯ ವತಿಯಿಂದ ಅಭಿನಂದಿಸಲಾಯಿತು
                             
                                                                                    
ಶಾಲೆಯಿಂದ ಈಗಾಗಲೇ ವರ್ಗಾವಣೆಗೊಂಡಿದ್ದು ಸದರಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎನ್.ಸಿ. ಪ್ರಕಾಶ್‌ ರವರು ಮೂರು ಜನ ಶಿಕ್ಷಕರಿಗೆ ವೈಯುಕ್ತಿಕವಾಗಿ ಅಭಿನಂದನೆ ಸಲ್ಲಿಸಿದರು.
ಶಾಲೆಯ ಪ್ರಾರಂಭದ ವರ್ಷಗಳಲ್ಲಿ ನಮ್ಮ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸಿ ಶಾಲೆಯ ಶ್ರೇಯೋಭಿವೃದ್ಧಿಗೆ ಶ್ರಮಿಸಿ ಪ್ರಸ್ತುತ ಸಾಲಿಗ್ರಾಮ ತಾಲ್ಲೂಕಿನ ಅಂಕನಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಮುಖ್ಯಶಿಕ್ಷಕರ ಹುದ್ಧೆ ಅಲಂಕರಿಸಿರುವ ಶ್ರೀಯುತ ನಾಗೇಂದ್ರಪ್ಪ ರವರು, ಶಾಲೆಯ ಶ್ರೇಯೋಭಿಲಾಷಿಗಳು ಕೆ. ಆರ್‌, ನಗರ ತಾಲ್ಲೂಕು ಶಿಕ್ಷಣಾಧಿಕಾರಿಗಳ ಸಂಘದ ಅಧ್ಯಕ್ಷರಾದ ಶ್ರೀಯುತ ನಾರಾಯಣ ಪ್ರಸಾದ್‌ ರವರು ಹಾಗೂ ಮತ್ತೋರ್ವ  ಹಿತೈಷಿಗಳು, ಹಂಪಾಪುರ ಸರ್ಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕಾರದ ಶ್ರೀಯುತ ಅರವಿಂದ್‌ ರವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಕಾರ್ಯಕ್ರಮಕ್ಕೆ ವಿಶೇಷ ಮೆರಗು ನೀಡಿತು.


                                                                                          
                                                         

                             
ಬೀಳ್ಕೊಡುಗೆ ಸ್ವೀಕರಿಸಿ ಮಾತನಾಡಿದ ಎಸ್.‌ ಆರ್.‌ ರಾಮಚಂದ್ರ ಹಾಗೂ ಶಾಹಿನ್ ಬಾನುರವರು ಮಾತನಾಡಿಅಂಕನಹಳ್ಳಿ ಶಾಲೆಗೆ ಅಂಕನಹಳ್ಳಿ ಶಾಲೆಯೇ ಸಾಟಿ, ಈ ಶಾಲೆಯ ಋಣ ಎಂದಿಗೂ ತೀರಿಸಲಾಗದು.ಮುಂದೆಯೂ ಶಾಲೆಯ ಪ್ರಖ್ಯಾತಿ ಎಲ್ಲಾ ಕಡೆ ಹಬ್ಬಲಿ ಎಂದು ಆಶಿಸಿದರು
                                                                                             

          ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ  ಶಾಲೆಯ ಮುಖ್ಯಶಿಕ್ಷಕರಾದ ಶ್ರೀಯುತ ಸೋಮಶೇಖರ್‌ ರವರು ಮಾತನಾಡಿ ಶಾಲೆಗೆ ಹಿರಿಯರು ಶುಭಘಳಿಗೆಯಲ್ಲಿ ಹಾಕಿದ ಭದ್ರಬುನಾದಿಯ ಫಲವಾಗಿ ಶಾಲೆಯ ಯಾವಾಗಲೂ ಎಲ್ಲಾ ಕಡೆ ಗುರುತಿಸಿಕೊಳ್ಳುವಂತೆ ಮಾಡಿದೆ ಅದನ್ನು ಉಳಿಸುವ , ಬೆಳೆಸುವ ಹೊಣೆ  ನಮ್ಮೆಲ್ಲರದು ಎಂದರಲ್ಲದೆ ಪ್ರಸ್ತುತ ವರ್ಷ ಶಾಲೆಯು ಕೆ.ಆರ್.‌ ನಗರ ತಾಲ್ಲೂಕಿನಲ್ಲಿ ಉತ್ತಮ ಶಾಲೆ ಪ್ರಶಸ್ತಿ ಪಡೆದುಕೊಂಡಿದೆ ಅದು ಮತ್ತಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಲು ನಮ್ಮೆಲ್ಲರಿಗೂ ಪ್ರೇರಣೆ ಎಂದು ಅಭಿಪ್ರಾಯ ವ್ಯಕ್ತ ಪಡಿಸಿದರು.
                                                                       
 (ದಿನಾಂಕ 05-09-2023 ರಂದು ಕೆ.ಆರ್.ನಗರದ ರೇಡಿಯೋ ಮೈದಾನದಲ್ಲಿ ನಡೆದ ತಾಲ್ಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ "ಉತ್ತಮ ಶಾಲಾ ಪ್ರಶಸ್ತಿ 2023" ನ್ನು ಮುಖ್ಯಶಿಕ್ಷಕರು  ಸ್ವೀಕರಿಸಿದ ಸಾಂದರ್ಭಿಕ ಚಿತ್ರ.)

ವಿದ್ಯಾರ್ಥಿಗಳು ತಮ್ಮ ನೆಚ್ಚಿನ ಗುರುಗಳಿಗೆ ಪ್ರೀತಿಯ ಉಡುಗೊರೆಗಳನ್ನು ನೀಡಿ ಸಂಭ್ರಮಿಸಿದರು









                               

 ಶಿಕ್ಷಕದಿನಾಚರಣೆ ಪ್ರಯುಕ್ತ ಪ್ರತಿಯೊಬ್ಬ ಶಿಕ್ಷಕರ ಬಗ್ಗೆಯೂ ಕವನ ರಚಿಸಿ ವಾಚಿಸಿದ 10 ನೆಯ ತರಗತಿಯ ವಿದ್ಯಾರ್ಥಿನಿ ಅಭಿನಯಳನ್ನು ಎಲ್ಲರೂ ಅಭಿನಂದಿಸಿದರು.

ಬೀಳ್ಗೊಂಡ ಶಿಕ್ಷಕಮಿತ್ರರಿಗಾಗಿ ತಯಾರಿಸಿ ಸಾದರಪಡಿಸಿದ ವೀಡಿಯೋ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಲ್ಲದೆ ಮನ ಮುಟ್ಟುವಂತಿತ್ತು. 


                                                                            



ನಿಮ್ಮ ಸಾಮರ್ಥ್ಯದ ಮೇಲೆ ನಿಮಗೆ ನಂಬಿಕೆಯಿರಲಿ.

ಪ್ರತಿಭಾ ಪುರಸ್ಕಾರ 2024-25 (2023-24 ನೆಯ ಸಾಲಿನ SSLC ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಅಭಿನಂದನೆ ) ದಿನಾಂಕ 13-07-2024 ರ ಶನಿವಾರದಂದು ಶಾಲೆ...