ಶಿಕ್ಷಕರ ದಿನಾಚರಣೆ 2023 ಹಾಗೂ ಬೀಳ್ಕೊಡುಗೆ ಸಮಾರಂಭ ದಿನಾಂಕ 11-09-2023
ದಿನಾಂಕ 11-09-2023 ರ ಸೋಮವಾರದಂದು ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ 2023, ವರ್ಗಾವಣೆಗೊಂಡ ಶಿಕ್ಷಕರಿಗೆ ಬೀಳ್ಕೊಡುಗೆ ,ಹಾಗೂ 2023-24 ನೆಯ ಸಾಲಿನ ಮೈಸೂರು ಜಿಲ್ಲಾಮಟ್ಟದ ಉತ್ತಮ ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಮುಖ್ಯೋಪಾದ್ಯಾಯರಾದ ಶ್ರೀಯುತ ಸೋಮಶೇಖರ್ ರವರು ವಹಿಸಿಕೊಂಡಿದ್ದರು.
ವಿದ್ಯಾರ್ಥಿಗಳ ಪ್ರಾರ್ಥನೆಯೊಂದಿಗೆ ಚಾಲನೆಗೊಂಡು ವಿಜ್ಞಾನ ಶಿಕ್ಷಕರಾದ ಶ್ರೀಯುತ ಡಿ.ಶಿವಕುಮಾರ್ ರವರು ಎಲ್ಲರನ್ನೂ ಆತ್ಮೀಯವಾಗಿ ಸ್ವಾಗತಿಸಿದರು.
ಕಾರ್ಯಕ್ರಮದಲ್ಲಿ ಪ್ರಸ್ತುತ ವರ್ಷ ಹೆಚ್ಚುವರಿ ವರ್ಗಾವಣೆಯಲ್ಲಿ ಕೆ.ಆರ್.ನಗರ ತಾಲ್ಲೂಕಿನ ಮಾವತ್ತೂರು ಶಾಲೆಗೆ ವರ್ಗಾವಣೆಗೊಂಡ ಶ್ರೀಯುತ ಎನ್.ಸಿ. ಪ್ರಕಾಶ್, ಮೈಸೂರಿನ ಆದರ್ಶ ವಿದ್ಯಾಲಯಕ್ಕೆ ವರ್ಗಾವಣೆಗೊಂಡ ಶ್ರೀಯುತ ಎಸ್.ಆರ್. ರಾಮಚಂದ್ರ, ಹಾಗೂ ಹಾಸನ ಜಿಲ್ಲೆಯ ಗಿಡ್ಡೇನಹಳ್ಳಿ ಪ್ರೌಢಶಾಲೆಗೆ ವರ್ಗಾವಣೆಗೊಂಡ ಶಾಹಿನ್ ಬಾನು ರವರನ್ನು ಆತ್ಮೀಯವಾಗಿ ಸ್ವಾಗತಿಸಲಾಯಿತು.
ಸನ್ಮಾನಿತರಿಗೆ ಶಾಲೆಯ ಸುಂದರ ಉದ್ಯಾನದ ಚಿತ್ರವುಳ್ಳ ನೆನಪಿನ ಕಾಣಿಕೆ ನೀಡಿ ಶಾಲೆಯಲ್ಲಿ ಶಿಕ್ಷಕರ ಕರ್ತವ್ಯದ ದಿನಗಳ ನೆನಪು ಚಿರವಾಗಿರುವಂತೆ ಶುಭಕೋರಿದ್ದು ವಿಶೇಷವಾಗಿತ್ತು.
ಶಾಲೆಯಿಂದ ಈಗಾಗಲೇ ವರ್ಗಾವಣೆಗೊಂಡಿದ್ದು ಸದರಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎನ್.ಸಿ. ಪ್ರಕಾಶ್ ರವರು ಮೂರು ಜನ ಶಿಕ್ಷಕರಿಗೆ ವೈಯುಕ್ತಿಕವಾಗಿ ಅಭಿನಂದನೆ ಸಲ್ಲಿಸಿದರು.
ಶಾಲೆಯ ಪ್ರಾರಂಭದ ವರ್ಷಗಳಲ್ಲಿ ನಮ್ಮ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸಿ ಶಾಲೆಯ ಶ್ರೇಯೋಭಿವೃದ್ಧಿಗೆ ಶ್ರಮಿಸಿ ಪ್ರಸ್ತುತ ಸಾಲಿಗ್ರಾಮ ತಾಲ್ಲೂಕಿನ ಅಂಕನಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಮುಖ್ಯಶಿಕ್ಷಕರ ಹುದ್ಧೆ ಅಲಂಕರಿಸಿರುವ ಶ್ರೀಯುತ ನಾಗೇಂದ್ರಪ್ಪ ರವರು, ಶಾಲೆಯ ಶ್ರೇಯೋಭಿಲಾಷಿಗಳು ಕೆ. ಆರ್, ನಗರ ತಾಲ್ಲೂಕು ಶಿಕ್ಷಣಾಧಿಕಾರಿಗಳ ಸಂಘದ ಅಧ್ಯಕ್ಷರಾದ ಶ್ರೀಯುತ ನಾರಾಯಣ ಪ್ರಸಾದ್ ರವರು ಹಾಗೂ ಮತ್ತೋರ್ವ ಹಿತೈಷಿಗಳು, ಹಂಪಾಪುರ ಸರ್ಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕಾರದ ಶ್ರೀಯುತ ಅರವಿಂದ್ ರವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಕಾರ್ಯಕ್ರಮಕ್ಕೆ ವಿಶೇಷ ಮೆರಗು ನೀಡಿತು.
ಬೀಳ್ಕೊಡುಗೆ ಸ್ವೀಕರಿಸಿ ಮಾತನಾಡಿದ ಎಸ್. ಆರ್. ರಾಮಚಂದ್ರ ಹಾಗೂ ಶಾಹಿನ್ ಬಾನುರವರು ಮಾತನಾಡಿಅಂಕನಹಳ್ಳಿ ಶಾಲೆಗೆ ಅಂಕನಹಳ್ಳಿ ಶಾಲೆಯೇ ಸಾಟಿ, ಈ ಶಾಲೆಯ ಋಣ ಎಂದಿಗೂ ತೀರಿಸಲಾಗದು.ಮುಂದೆಯೂ ಶಾಲೆಯ ಪ್ರಖ್ಯಾತಿ ಎಲ್ಲಾ ಕಡೆ ಹಬ್ಬಲಿ ಎಂದು ಆಶಿಸಿದರು
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲೆಯ ಮುಖ್ಯಶಿಕ್ಷಕರಾದ ಶ್ರೀಯುತ ಸೋಮಶೇಖರ್ ರವರು ಮಾತನಾಡಿ ಶಾಲೆಗೆ ಹಿರಿಯರು ಶುಭಘಳಿಗೆಯಲ್ಲಿ ಹಾಕಿದ ಭದ್ರಬುನಾದಿಯ ಫಲವಾಗಿ ಶಾಲೆಯ ಯಾವಾಗಲೂ ಎಲ್ಲಾ ಕಡೆ ಗುರುತಿಸಿಕೊಳ್ಳುವಂತೆ ಮಾಡಿದೆ ಅದನ್ನು ಉಳಿಸುವ , ಬೆಳೆಸುವ ಹೊಣೆ ನಮ್ಮೆಲ್ಲರದು ಎಂದರಲ್ಲದೆ ಪ್ರಸ್ತುತ ವರ್ಷ ಶಾಲೆಯು ಕೆ.ಆರ್. ನಗರ ತಾಲ್ಲೂಕಿನಲ್ಲಿ ಉತ್ತಮ ಶಾಲೆ ಪ್ರಶಸ್ತಿ ಪಡೆದುಕೊಂಡಿದೆ ಅದು ಮತ್ತಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಲು ನಮ್ಮೆಲ್ಲರಿಗೂ ಪ್ರೇರಣೆ ಎಂದು ಅಭಿಪ್ರಾಯ ವ್ಯಕ್ತ ಪಡಿಸಿದರು.
(ದಿನಾಂಕ 05-09-2023 ರಂದು ಕೆ.ಆರ್.ನಗರದ ರೇಡಿಯೋ ಮೈದಾನದಲ್ಲಿ ನಡೆದ ತಾಲ್ಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ "ಉತ್ತಮ ಶಾಲಾ ಪ್ರಶಸ್ತಿ 2023" ನ್ನು ಮುಖ್ಯಶಿಕ್ಷಕರು ಸ್ವೀಕರಿಸಿದ ಸಾಂದರ್ಭಿಕ ಚಿತ್ರ.)
ವಿದ್ಯಾರ್ಥಿಗಳು ತಮ್ಮ ನೆಚ್ಚಿನ ಗುರುಗಳಿಗೆ ಪ್ರೀತಿಯ ಉಡುಗೊರೆಗಳನ್ನು ನೀಡಿ ಸಂಭ್ರಮಿಸಿದರು
ಶಿಕ್ಷಕದಿನಾಚರಣೆ ಪ್ರಯುಕ್ತ ಪ್ರತಿಯೊಬ್ಬ ಶಿಕ್ಷಕರ ಬಗ್ಗೆಯೂ ಕವನ ರಚಿಸಿ ವಾಚಿಸಿದ 10 ನೆಯ ತರಗತಿಯ ವಿದ್ಯಾರ್ಥಿನಿ ಅಭಿನಯಳನ್ನು ಎಲ್ಲರೂ ಅಭಿನಂದಿಸಿದರು.
ಬೀಳ್ಗೊಂಡ ಶಿಕ್ಷಕಮಿತ್ರರಿಗಾಗಿ ತಯಾರಿಸಿ ಸಾದರಪಡಿಸಿದ ವೀಡಿಯೋ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಲ್ಲದೆ ಮನ ಮುಟ್ಟುವಂತಿತ್ತು.
No comments:
Post a Comment