🙏🙏 **ಸರ್ಕಾರಿ ಪ್ರೌಢಶಾಲೆ ಅಂಕನಹಳ್ಳಿಯ ಶೈಕ್ಷಣಿಕ ಜಾಲತಾಣಕ್ಕೆ ಆತ್ಮೀಯ ಸ್ವಾಗತ.**🙏🙏

Wednesday, 8 November 2023

ಬಾಲ್ಯ ವಿವಾಹ ಮುಕ್ತ ಕರ್ನಾಟಕ ಅಭಿಯಾನ ದಿನಾಂಕ : 09/11/2023

         ಸರ್ಕಾರಿ ಪ್ರೌಢಶಾಲೆ ಅಂಕನಹಳ್ಳಿ ಚುಂಚನಕಟ್ಟೆ ಹೋಬಳಿ ಸಾಲಿಗ್ರಾಮ ತಾಲೂಕು 


ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ , ಮೈಸೂರು ರವರ ಪ .ಸಂ : ಜಿಕಾಸೇಪ್ರಾ/ಮೈ/781/2023  ದಿನಾಂಕ : 31/10/2023 ರ ಅನ್ವಯ ದಿನಾಂಕ 09/11/2023 ರಂದು ಶಾಲೆಯಲ್ಲಿ ರಾಷ್ಟ್ರೀಯ ಕಾನೂನು ಸೇವೆಗಳ  ದಿನಾಚರಣೆ ಪ್ರಯುಕ್ತ ಶಾಲೆಯಲ್ಲಿ ಬಾಲ್ಯ ವಿವಾಹ ಮುಕ್ತ ಕರ್ನಾಟಕ ಅಭಿಯಾನ ಪ್ರಯುಕ್ತ ಬೆಳಗಿನ ಪ್ರಾರ್ಥನಾ ಅವಧಿಯಲ್ಲಿ ಮುಖ್ಯ  ಶಿಕ್ಷಕರು ಮತ್ತು ಶಿಕ್ಷಕರು , ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳು ಒಡಗೂಡಿ ಪ್ರತಿಜ್ಞೆ ಕೈಗೂಳ್ಳಲಾಯಿತು


ಪ್ರತಿಜ್ಞೆ ಕೈಗೊಳ್ಳುತ್ತಿರುವ ವೀಡಿಯೋ

ನಂತರ ವಿದ್ಯಾರ್ಥಿಗಳಿಗೆ ಬಾಲ್ಯವಿವಾಹ,ಪರಿಣಾಮ ,ತಡೆಗಟ್ಟುವಲ್ಲಿ ನಮ್ಮ ಪಾತ್ರ ವಿಷಯ ಕುರಿತು ವಿಚಾರಗೋಷ್ಠಿ /ಉಪನ್ಯಾಸ  ಏರ್ಪಡಿಸಲಾಗಿತ್ತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಮುಖ್ಯಶಿಕ್ಷಕರಾದ ಶ್ರೀಯುತ ಸೋಮಶೇಖರ್ ರವರು ವಹಿಸಿದ್ದರು.

ಶಾಲೆಯ ವಿಜ್ಞಾನ ಶಿಕ್ಷಕರಾದ ಶ್ರೀಯುತ ಶಿವಕುಮಾರ್ ಡಿ.ಎಸ್ ರವರು ಬಾಲ್ಯವಿವಾಹ ಎಂದರೇನು? ಬಾಲ್ಯವಿವಾಹಕ್ಕೆಕಾರಣಗಳ,ಬಾಲ್ಯವಿವಾಹದಿಂದಾಗುವ ದುಷ್ಪರಿಣಾಮಗಳು ಹಾಗೂ ಬಾಲ್ಯವಿವಾಹ ತಡೆಗಟ್ಟುವ ಕ್ರಮಗಳು ಹಾಗೂ ಬಾಲ್ಯವಿವಾಹ ತಡೆಯುವಲ್ಲಿ ನಮ್ಮೆಲ್ಲರ ಪಾತ್ರದ ಬಗ್ಗೆ ಉಪನ್ಯಾಸ ನೀಡಿದರು.



ಶಾಲೆಯ ಸಮಾಜವಿಜ್ಞಾನ ಶಿಕ್ಷಕರಾದ ಶ್ರೀಯುತ ಸಾಗರ್ ರವರು ಬಾಲ್ಯವಿವಾಹ ನಿಷೇದ ಕಾಯಿದೆಯ ಜಾರಿ,ತಿದ್ದುಪಡಿ,ಮತ್ತು ಮಹತ್ವವನ್ನು ತಿಳಿಸಿದರಲ್ಲದೆ, ಬಾಲ್ಯವಿವಾಹವನ್ನು ತಡೆಯುವಲ್ಲಿ ವಿದ್ಯಾರ್ಥಿಗಳು ವಹಿಸಬೇಕಾದ ಜಾಗೃತಿಯ ಬಗ್ಗೆ ಮನವರಿಕೆ ಮಾಡಿಕೊಟ್ಟರು.

ಕಾರ್ಯಕ್ರಮದ ಅದ್ಯಕ್ಷತೆ ವಹಿಸಿ ಮಾತನಾಡಿದ ಮುಖ್ಯಶಿಕ್ಷಕರಾದ ಸೋಮಶೇಖರ್ ರವರು ಮಾತನಾಡಿ ಬಾಲ್ಯವಿವಾಹ ಮಕ್ಕಳ ಹಕ್ಕುಗಳನ್ನು ಕಸಿಯುವುದಲ್ಲದೆ,ಹಕ್ಕು ಮತ್ತು ಕಾನೂನಿನ ಉಲ್ಲಂಘನೆ ಯಾಗುತ್ತದೆ. ಮದುವೆಯ ನಿರ್ದಿಷ್ಟ ವಯಸ್ಸಿಗಿಂತ ಮೊದಲು ಮದುವೆ ಮಾಡುವುದರಿಂದ ಆರೋಗ್ಯ ವಂತ ಸಮಾಜ ನಿರ್ಮಾಣ ಅಸಾಧ್ಯವೆಂದು ಮನವರಿಕೆ ಮಾಡಿಕೊಟ್ಟರು.ಬಾಲ್ಯವಿವಾಹದಿಂದ ಉಂಟಾಗುವ ಕೌಟುಂಬಿಕ,ಸಾಮಾಜಿಕ ತೊಂದರೆಗಳನ್ನು ಬಿಚ್ಚಿಟ್ಟರು.ಅಲ್ಲದೆ ವಿದ್ಯಾರ್ಥಿಗಳು ಎಚ್ಚರ ವಹಿಸಿ ಸಂಬಂದಿಸಿದ ಪ್ರಾಧಿಕಾರ ಗಳಿಗೆ ಅಧಿಕಾರಿಗಳಿಗೆ ತಿಳಿಸುವ ಪ್ರಯತ್ನ ಮಾಡಬೇಕು ಎಂದು ತಿಳಸಿದರು.
ಕಾರ್ಯಕ್ರಮ ದಲ್ಲಿ ಶಿಕ್ಷಕರಾದ ಶ್ರೀಯುತ ಸಿ.ಎಸ್ ರಾಜುರವರು ,ಶ್ರೀಯುತ ಸೋಮೇಶಿಯವರು ಪ್ರಥಮದರ್ಜೆ ಸಹಾಯಕರಾದ ಹರೀಶ್ ಹಾಗೂ ಸಿಬ್ಬಂದಿ ದಯಾನಂದ ಉಪಸ್ಥಿತರಿದ್ದರು.
ಶ್ರೀಯುತ ಮಂಜುನಾಥ್ ಎಲ್.ಈ. ಕಾರ್ಯಕ್ರಮ ನಿರೂಪಣೆ ಮಾಡಿ ವಂದಿಸಿದರು.


No comments:

ನಿಮ್ಮ ಸಾಮರ್ಥ್ಯದ ಮೇಲೆ ನಿಮಗೆ ನಂಬಿಕೆಯಿರಲಿ.

ಪ್ರತಿಭಾ ಪುರಸ್ಕಾರ 2024-25 (2023-24 ನೆಯ ಸಾಲಿನ SSLC ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಅಭಿನಂದನೆ ) ದಿನಾಂಕ 13-07-2024 ರ ಶನಿವಾರದಂದು ಶಾಲೆ...