ವಿದ್ಯಾರ್ಥಿಗಳು ಮೂರು ರೀತಿಯ ಮೌಲ್ಯಗಳನ್ನು ಅಳವಡಿಸಿಕೊಂಡರೆ ಅದೇ ರಾಷ್ಟ್ರಕ್ಕೆ ಅಪರಿಮಿತ ಕೊಡುಗೆ
ದಿನಾಂಕ 15-11-2023 ರಂದುಚುಂಚನಕಟ್ಟೆ ಹೋಬಳಿ ಸಾಳಿಗ್ರಾಮ ತಾಲ್ಲೂಕಿನ ಸರ್ಕಾರಿ ಪ್ರೌಢಶಾಲೆ ಅಂಕನಹಳ್ಳಿಯಲ್ಲಿ ಆಚರಿಸಿದ ಮಕ್ಕಳ ದಿನಾಚರಣೆ ಸಂದರ್ಭದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲೆಯ ಮುಖ್ಯಶಿಕ್ಷರಾದ ಶ್ರೀಯುತ ಎಸ್ ಸೋಮಶೇಖರ್ ರವರು ಅಭಿಪಾರಯಪಟ್ಟರು.
ದಿನಾಂಕ 15-11-2023 ರಂದು ಮಕ್ಕಳ ದಿನಾಚರಣೆಯನ್ನು ಶಾಲೆಯಲ್ಲಿ ಬಹಳ ಅರ್ಥಪೂರ್ಣ ಹಾಗೂ ಸಡಗರದಿಂದ ಆಚರಿಸಲಾಯಿತು.
ದಿನದ ಮೊದಲಿಗೆ ಮಕ್ಕಳಿಗೆ ಮನರಂಜನಾತ್ಮಕ ಹಾಗೂ ಕೆಲವು ಉಪಯುಕ್ತ ಮೌಲ್ಯಗಳನ್ನು ಉಣಬಡಿಸುವ ಆಟಗಳನ್ನು ಆಡಿಸಲಾಯಿತು.
ಆಟದಲ್ಲಿ ಮಕ್ಕಳ ಭಾಗವಹಿಸುವಿಕೆಯ ವೀಡಿಯೋ ತುಣುಕು
ವೇದಿಕೆ ಕಾರ್ಯಕ್ರಮ ದ ಅಧ್ಯಕ್ಷತೆಯನ್ನು ಶಾಲಾ ಮುಖ್ಯಶಿಕ್ಷಕರಾದ ಶ್ರೀಯುತ ಎಸ್ ಸೋಮಶೇಖರ್ ರವರು ವಹಿಸಿದ್ದರು.
ಕನ್ನಡ ಭಾಷಾ ಶಿಕ್ಷಕರಾದ ಶ್ರೀಯುತ ಎಲ್.ಈ .ಮಂಜುನಾಥ್ ರವರ ದೈವಸ್ತುತಿಯೊಂದಿಗೆ ವೇದಿಕೆ ಕಾರ್ಯ ಕ್ರಮಕ್ಕೆ ಚಾಲನೆ ನೀಡಲಾಯಿತು.ಸಾಗರ್ ಸರ್ ರವರು ಎಲ್ಲರನ್ನು ಆತ್ಮೀಯವಾಗಿ ಸ್ವಾಗತಿಸಿದರು.
ಶಾಲೆಯ ಹಿರಿಯ ಶಿಕ್ಷಕರಾದ ಶ್ರೀಯುತ ಸಿ.ಎಸ್. ರಾಜು ರವರು ಎಲ್ಲಾ ಮಕ್ಕಳಿಗೆ ಮಕ್ಕಳ ದಿನಾಚರಣೆ ಯ ಶುಭಾಶಯ ಗಳನ್ನು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಮಾಜವಿಜ್ಞಾನ ಶಿಕ್ಷಕರಾದ ಶ್ರೀಯುತ ಸಾಗರ್ ರವರು ಮಾತನಾಡಿ ಮಕ್ಕಳ ದಿನಾಚರಣೆಯ ಹಿನ್ನಲೆ, ಉದ್ದೇಶ ಮತ್ತು ಆಚರಣೆಯ ಮಹತ್ವವನ್ನು ತಿಳಿಸಿಕೊಟ್ಟರು.
ಕನ್ನಡ ಭಾಷಾ ಶಿಕ್ಷಕರಾದ ಶ್ರೀಯುತ ಎಲ್.ಈ. ಮಂಜುನಾಥ್ ರವರು ಮಕ್ಕಳಿಗೆ ಶುಭಾಶಯ ಕೋರಿ ಇಂದಿನ ಮಕ್ಕಳೆ ಮುಂದಿನ ಪ್ರಜೆಗಳು ನೀವೆಲ್ಲರೂ ಉತ್ತಮ ಪ್ರಜೆಗಳಾದರೆ ಸಾಕು ರಾಷ್ಟ್ರಕ್ಕೆ ಅಪರಿಮಿತ ಕೊಡುಗೆ ಕೊಟ್ಟಂತಾಗುತ್ತದೆ ಎಂದು ಅಭಿಪ್ರಾಯ ಪಟ್ಟರು.
ಕಾರ್ಯಕ್ರಮ ದ ಅಧ್ಯಕ್ಷೀಯ ಭಾಷಣ ಮಾಡಿದ ಮುಖ್ಯಗುರುಗಳು ಇಂದಿನ ಯುವಪೀಳಿಗೆ ಮೂರು ಮೌಲ್ಯಗಳಾದ ವೈಯಕ್ತಿಕ ಮೌಲ್ಯ,ಸಾಮಾಜಿಕ ಮೌಲ್ಯ,ಮತ್ತು ರಾಷ್ಟ್ರೀಯ ಮೌಲ್ಯ ಗಳನ್ನು ಅಳವಡಿಸಿಕೊಂಡರೆ ವೈಯಕ್ತಿಕ ಜೀವನ ಹಾಗೂ ರಾಷ್ಟ್ರದ ಅಭಿವೃದ್ಧಿ ಎರಡಕ್ಕೂ ಪೂರಕ ವಾಗುತ್ತದೆ. ಆ ಮೌಲ್ಯಗಳನ್ನು ಶಾಲಾ ಜೀವನದ ಅವಧಿಯಲ್ಲಿಯೇ ರೂಢಿಸಿಕೊಳ್ಳಬೇಕೆಂದು ಹಿತವಚನ ಹೇಳಿದರು.
ವಿವಿಧ ಮನರಂಜನಾ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಹಾಗೂ ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೆ ಕಿರುಕಾಣಿಕೆ ನೀಡಲಾಯಿತು.
ವಿಜ್ಞಾನ ಶಿಕ್ಷಕರಾದ ಶ್ರೀಯುತ ಡಿ.ಶಿವಕುಮಾರ್ ರವರು ಕಾರ್ಯಕ್ರಮವನ್ನು ನಿರೂಪಿಸಿ ಭಾಗವಹಿಸಿದ ಎಲ್ಲರಿಗೆ ಧನ್ಯವಾದಗಳನ್ನು ಸಮರ್ಪಿಸಿದ ರು.
ಕಾರ್ಯಕ್ರದ ಕೊನೆಯಲ್ಲಿ ವಿವಿಧ ಹಾಡುಗಳಿಗೆ ನರ್ತಿಸುವ ಮೂಲಕ ಮಕ್ಕಳು ಆನಂದಿಸಿದರು.
No comments:
Post a Comment