Thursday, 30 November 2023
ಅರ್ಥವಿಲ್ಲದ ಸಿನಿಮಾ ಹಾಡುಗಳ ಬದಲು ಬದುಕಿಗೆ ದಾರಿ ತೋರಿಸುವ ಕೀರ್ತನೆಗಳ ಕಲಿಕೆ ಆರೋಗ್ಯಕರ.
ಕನಕದಾಸ ಜಯಂತಿ. 30-11-2023
ದಾಸ ಶ್ರೇಷ್ಠರ ಕೀರ್ತನೆಗಳು ಬದುಕಿಗೆ ದಾರಿ ತೋರಿಸುವ ದೀವಿಗೆಗಳಂತಿದ್ದು ಜೀವನದ ಕೆಲವು ಕ್ಲಿಷ್ಠ ಸಂದರ್ಭಗಳಲ್ಲಿ ಸೂಕ್ತ ನಿರ್ಧಾರಕ್ಕೆ ಮಾರ್ಗದರ್ಶನ ಮಾಡುತ್ತವೆ ಎಂದು ಶಾಲೆಯ ಮುಖ್ಯಶಿಕ್ಷರಾದ ಶ್ರೀಯುತ ಸೋಮಶೆಖರ್ ರವರು ದಿನಾಂಕ 30-11-2023 ರಂದು ಕನಕದಾಸ ಜಯಂತಿ ಕಾರ್ಯಕ್ರಮದ ಅಧ್ಯಕ್ಷೀಯ ಭಾಷಣದಲ್ಲಿ ಅಭಿಪ್ರಾಯ ಪಟ್ಟರು.
ಶಾಲೆಯಲ್ಲಿ ಕನಕದಾಸರ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಹತ್ತನೆಯ ತರಗತಿಯ ವಿದ್ಯಾರ್ಥಿನಿಯರ ದೈವತಾ ಸ್ತುತಿಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆದೊರಕಿತು.ಕಾರ್ಯಕ್ರಮದ ನಿರೂಪಣೆಯಿಂದ ವಂದನಾರ್ಪಣೆವರೆಗೆ ವಿದ್ಯಾರ್ಥಿಗಳೆ ನಿರ್ವಹಿಸಿದ್ದು ವಿಶೇಷವಾಗಿತ್ತು.
ಕನಕದಾಸ ಜಯಂತಿಯ ಆಚರಣೆ, ಉದ್ದೇಶ,ಕನಕರ ಜೀವನ ಚರಿತ್ರೆ,ಬಾಲ್ಯ, ತಿಮ್ಮಪ್ಪನಾಯಕರು,ಕನಕನಾಯಕ ಹಾಗೂ ಕನಕದಾಸರಾದ ಬಗೆ,ಅವರ ಕೀರ್ತನೆಗಳು ,ಸಾಹಿತ್ಯ ಕೃತಿಗಳನ್ನು ವಿದ್ಯಾರ್ಥಿಗಳಾದ ಗೌತಮ್,ಮನೋಜ್,ಪಲ್ಲವಿ,ಚಿನ್ನು,ಚಂದ್ರಶೇಖರ್,ಧನುಷ್ ಮುಂತಾದ ವಿದ್ಯಾರ್ಥಿಗಳು ವಿವರಣಾತ್ಮಕವಾಗಿ ತಿಳಿಸಿಕೊಟ್ಟರು.
ಶಾಲೆಯ ಶಿಕ್ಷಕರಾದ ಶ್ರೀಯುತ ರಾಜು ಸಿ.ಎಸ್, ಮಂಜುನಾಥ.ಎಲ್. ಈ. ಶಿವಕುಮಾರ್.ಡಿ.ಎಸ್. ಮತ್ತು ಸಾಗರ್.ಸಿ.ಎಸ್.ರವರು ಹಾಗೂ ಪ್ರಥಮದರ್ಜೆ ಸಹಾಯಕರಾದ ಹರೀಶ್ ಮತ್ತು ಕಛೇರಿ ಸಹಾಯಕರಾದ ದಯಾನಂದ್ ರವರು ಹಾಜರಿದ್ದು ಕನಕದಾಸರ ಕೃತಿಗಳ ರಚನೆ,ಒಳಗೊಂಡಿರುವ ಸಾಹಿತ್ಯಿಕ ಅಂಶಗಳು,ಪರಿಚಯಿಸಿ ಕನಕದಾಸರ ಕೀರ್ತನೆಗಳ ಮಹತ್ವ ತಿಳಿಸಿಕೊಟ್ಟರು.
8ನೆಯ ತರಗತಿಯ ವಿದ್ಯಾರ್ಥಿನಿಯರು ಕಾರ್ಯಕ್ರಮದ ಉದ್ದಕ್ಕೂ ಕನಕರ ಕೀರ್ತನೆಗಳನ್ನು ಪ್ರಸ್ತುತಪಡಿಸಿದ್ದು ಕಾರ್ಯಕ್ರಮಕ್ಕೆ ಮೆರಗು ನೀಡಿತು.ವಿದ್ಯಾರ್ಥಿಗಳು ವಾಚಿಸಿದ ಕೀರ್ತನೆಗಳನ್ನು ಧ್ವನಿಸುರುಳಿಗಳ ಮೂಲಕ ಎಲ್ಲರಿಗೂ ಕೇಳಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಲೆಯ ಮುಖ್ಯಶಿಕ್ಷಕರು 12 ನೆಯ ಶತಮಾನದ ವಚನ ಸಾಹಿತ್ಯ ಹಾಗೂ 15 ನೆಯ ಶತಮಾನದ ದಾಸಸಾಹಿತ್ಯ ಪರಂಪರೆಗಳು ಕನ್ನಡ ಸಾಹಿತ್ಯಕ್ಷೇತ್ರದಲ್ಲಿ ಗಣನೀಯ ಪಾತ್ರವಹಿಸುತ್ತವೆ.ಎಂದು ತಿಳಿಸಿದರು. ಈ ಎರಡು ಪರಂಪರೆಗಳು ಜನ ಸಾಮಾನ್ಯರಿಗೂ ತಲುಪುವಂತೆ ವಚನ ಕಾರರ ಮತ್ತು ದಾಸರುಗಳ ತಮ್ಮಸಾಹಿತ್ಯರಚನೆಗಳಿದ್ದವು.
ಕೀರ್ತನೆಗಳು ಅರ್ಥಪೂರ್ಣ ರಚನೆಗಳಾಗಿದ್ದು ವಿದ್ಯಾರ್ಥಿಗಳು ಅನರ್ಥ ಸೃಷ್ಟಿಸುವ ಸಿನಿಮಾ ಹಾಡುಗಳನ್ನು ಕಲಿಯುವ ಬದಲು ಕೀರ್ತನೆಗಳನ್ನು ಆಳಿಸಿ ಕಲಿಯುವುದರಿಂದ ಶೈಕ್ಷಣಿಕವಾಗಿಯೂ ಉಪಯುಕ್ತವಾಗಿವೆ ಎಂದು ಮಾರ್ಗದರ್ಶನ ಮಾಡಿದರು.
10 ನೆಯ ತರಗತಿಯ ವಿದ್ಯಾರ್ಥಿ ರಾಹುಲ್ ಕಾರ್ಯಕ್ರಮ ನಿರೂಪಿಸಿ 9ನೆಯ ತರಗತಿಯ ವೇದಾವತಿ ಎಲ್ಲರಿಗೂ ಧನ್ಯವಾದ ಸಮರ್ಪಿಸಿದರು.
Monday, 27 November 2023
ಸಂವಿಧಾನ ದಿನ , ದಿನಾಂಕ 27/11/2023.
ಸಂವಿಧಾನ ದಿನ , ದಿನಾಂಕ 27/11/2023.
ಸರ್ಕಾರಿ ಪ್ರೌಢ ಶಾಲೆ ಅಂಕನಹಳ್ಳಿ (ಚುಂ) ಸಾಲಿಗ್ರಾಮ ತಾಲೂಕು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮೈಸೂರುರವರ ಪತ್ರ ಸಂಖ್ಯೆ:ಜಿಕಾಸೇಪ್ರಾ/ಮೈ/862/2023 ದಿನಾಂಕ20/11/2023ರ ಅನ್ವಯ
ದಿನಾಂಕ 27/11/2023ರಂದು ಶಾಲೆಯಲ್ಲಿ ಸಂವಿಧಾನ ದಿನದ ಪ್ರಯುಕ್ತ ವಿದ್ಯಾರ್ಥಿಗಳಿಗೆ ಸಂವಿಧಾನ ಪೀಠಿಕೆ ಓದಿಸಿ ಮೂಲಭೂತ ಹಕ್ಕುಗಳ ಮತ್ತು ಕರ್ತವ್ಯಗಳ ಬಗ್ಗೆ ಸಂಕ್ಷಿಪ್ತವಾಗಿ ತಿಳಿಸಲಾಯಿತು.
ವಿದ್ಯಾರ್ಥಿಗಳಿಗೆ ಸಂವಿಧಾನ ಪೀಠಿಕೆ ಓದಿಸಿ ಮೂಲಭೂತ ಹಕ್ಕುಗಳ ಮತ್ತು ಕರ್ತವ್ಯಗಳ ಬಗ್ಗೆ ಸಂಕ್ಷಿಪ್ತವಾಗಿ ತಿಳಿಸಲಾಯಿತು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಮುಖ್ಯಶಿಕ್ಷಕರಾದ ಶ್ರೀಯುತ ಸೋಮಶೇಖರ್ ರವರು ವಹಿಸಿದ್ದರು.
ನಮ್ಮ ಶಾಲೆಯ ವಿದ್ಯಾರ್ಥಿಗಳಾದ ಗೌತಮ್ , ಮನೋಜ್ , ಕೃತಿಕಾ , ಪ್ರೀತು , ವೇದಾವತಿ ಹಾಗೂ ತ್ರಿವೇಣಿ ರವರು ಸಂವಿಧಾನ ದಿನ ಕುರಿತು ಭಾಷಣ ಮಾಡಿದರು
ಶಾಲೆಯ ವಿಜ್ಞಾನ ಶಿಕ್ಷಕರಾದ ಶ್ರೀಯುತ ಶಿವಕುಮಾರ್ ಡಿ ಎಸ್ ರವರು ಸಂವಿಧಾನ ದಿನದ ಕುರಿತು ಭಾಷಣ ಮಾಡಿದರು.
ಸಮಾಜ ವಿಜ್ಞಾನ ಶಿಕ್ಷಕರಾದ ಶ್ರೀಯುತ ಸಾಗರ್ ರವರು ಸಂವಿಧಾನದ ದಿನ , ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳ ಬಗ್ಗೆ ಕುರಿತು ಮಾತನಾಡಿದರು.
ಸಂವಿಧಾನ ದಿನದ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿದ ಮುಖ್ಯ ಶಿಕ್ಷಕರಾದ ಶ್ರೀಯುತ ಸೋಮಶೇಖರ್ ರವರು ಸಂವಿಧಾನ ದಿನದ ಮಹತ್ವ , ಸಂವಿಧಾನದ ರಚನೆ , ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳ ಬಗ್ಗೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಶಿಕ್ಷಕರಾದ ಶ್ರೀಯುತ ರಾಜು ಸಿ ಎಸ್ ರವರು ಹಾಗೂ ಸಿಬ್ಬಂದಿ ದಯಾನಂದರವರು ಉಪಸ್ಥಿತರಿದ್ದರು.
ನಮ್ಮ ಶಾಲೆಯ ವಿದ್ಯಾರ್ಥಿನಿಯರಾದ ಸಿಂಚನರವರು ಕಾರ್ಯಕ್ರಮದ ಕುರಿತು ನಿರೂಪಣೆ ಮಾಡಿದರು ಪ್ರೀತುರವರು ಸ್ವಾಗತ ಕೋರಿದರು ಮಾನ್ಯರವರ ವಂದನಾರ್ಪಣೆ ಮಾಡಿದರು.
Thursday, 16 November 2023
ಹುಟ್ಟುಹಬ್ಬದಂದು ಮಕ್ಕಳಿಗೆ ಲೋಟಗಳ ವಿತರಣೆ
ನಮ್ಮ ಶಾಲೆಯ ಕಛೇರಿ ಸಹಾಯಕ ರಾದ ಶ್ರೀಯುತ ದಯಾನಂದಕುಮಾರ್ ರವರು ತಮ್ಮ ಹುಟ್ಟುಹಬ್ಬದ ಪ್ರಯುಕ್ತ ಶಾಲೆಯ 8,9 ಮತ್ತು 10 ನೆಯ ತರಗತಿಗಳ ಎಲ್ಲಾ ಮಕ್ಕಳಿಗೆ ಸ್ಟೀಲ್ ಲೋಟಗಳನ್ನು ವಿತರಣೆ ಮಾಡಿದರು.
ಶ್ರೀಯುತರಿಗೆ ದೇವರು ಆಯಸ್ಸು, ಆರೋಗ್ಯ ,ಸಮೃದ್ಧಿಗಳನ್ನು ಕರುಣಿಸಲಿ ಎಂದು ವಿದ್ಯಾರ್ಥಿಗಳ ಹಾಗೂ ಶಿಕ್ಷಕರ ಮತ್ತು ಸಿಬ್ಬಂದಿ ಗಳ ಹಾರೈಕೆ.Wednesday, 15 November 2023
ಮಕ್ಕಳ ದಿನಾಚರಣೆ 2023
Wednesday, 8 November 2023
ಬಾಲ್ಯ ವಿವಾಹ ಮುಕ್ತ ಕರ್ನಾಟಕ ಅಭಿಯಾನ ದಿನಾಂಕ : 09/11/2023
ಸರ್ಕಾರಿ ಪ್ರೌಢಶಾಲೆ ಅಂಕನಹಳ್ಳಿ ಚುಂಚನಕಟ್ಟೆ ಹೋಬಳಿ ಸಾಲಿಗ್ರಾಮ ತಾಲೂಕು
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ , ಮೈಸೂರು ರವರ ಪ .ಸಂ : ಜಿಕಾಸೇಪ್ರಾ/ಮೈ/781/2023 ದಿನಾಂಕ : 31/10/2023 ರ ಅನ್ವಯ ದಿನಾಂಕ 09/11/2023 ರಂದು ಶಾಲೆಯಲ್ಲಿ ರಾಷ್ಟ್ರೀಯ ಕಾನೂನು ಸೇವೆಗಳ ದಿನಾಚರಣೆ ಪ್ರಯುಕ್ತ ಶಾಲೆಯಲ್ಲಿ ಬಾಲ್ಯ ವಿವಾಹ ಮುಕ್ತ ಕರ್ನಾಟಕ ಅಭಿಯಾನ ಪ್ರಯುಕ್ತ ಬೆಳಗಿನ ಪ್ರಾರ್ಥನಾ ಅವಧಿಯಲ್ಲಿ ಮುಖ್ಯ ಶಿಕ್ಷಕರು ಮತ್ತು ಶಿಕ್ಷಕರು , ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳು ಒಡಗೂಡಿ ಪ್ರತಿಜ್ಞೆ ಕೈಗೂಳ್ಳಲಾಯಿತು
ನಿಮ್ಮ ಸಾಮರ್ಥ್ಯದ ಮೇಲೆ ನಿಮಗೆ ನಂಬಿಕೆಯಿರಲಿ.
ಪ್ರತಿಭಾ ಪುರಸ್ಕಾರ 2024-25 (2023-24 ನೆಯ ಸಾಲಿನ SSLC ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಅಭಿನಂದನೆ ) ದಿನಾಂಕ 13-07-2024 ರ ಶನಿವಾರದಂದು ಶಾಲೆ...
-
ಪ್ರತಿಭಾ ಪುರಸ್ಕಾರ 2024-25 (2023-24 ನೆಯ ಸಾಲಿನ SSLC ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಅಭಿನಂದನೆ ) ದಿನಾಂಕ 13-07-2024 ರ ಶನಿವಾರದಂದು ಶಾಲೆ...