🙏🙏 **ಸರ್ಕಾರಿ ಪ್ರೌಢಶಾಲೆ ಅಂಕನಹಳ್ಳಿಯ ಶೈಕ್ಷಣಿಕ ಜಾಲತಾಣಕ್ಕೆ ಆತ್ಮೀಯ ಸ್ವಾಗತ.**🙏🙏

Tuesday, 29 December 2015

ಮರಳಿ ಯತ್ನವ ಮಾಡು.ಮರಳಿ ಯತ್ನವ ಮಾಡು.......


ಹತ್ತನೆಯ ತರಗತಿಯ ಪಠ್ಯಕ್ರಮ ಈಗಾಗಲೇ ಮುಗಿಯುವ ಹಂತದಲ್ಲದ್ದು ವಿದ್ಯಾರ್ಥಿಗಳನ್ನು ಅಧಿಕೃತವಾಗಿ ಅಧ್ಯಯನದಲ್ಲಿ ತೊಡಗಿಸುವ ಸಲುವಾಗಿ ಎಲ್ಲಾ ವಿಷಯಗಳ ಆಧರಿಸಿ ರಸಪ್ರಶ್ನೆ ಏರ್ಪಡಿಸಲಾಗಿತ್ತು.ಪ್ರಥಮ ಸ್ಥಾನ ವಂಚಿತರಾದ ವಿದ್ಯಾರ್ಥಿಗಳು ಮುಂದಿನ ರಸಪ್ರಶ್ನೆಯಲ್ಲಿ ಕ್ರಮಬದ್ಧ ಅಧ್ಯಯನ ನಡೆಸಿ ನಾವೂ ಪ್ರಥಮ ಸ್ಥಾನ ಪಡೆಯುವುದಾಗಿ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಸತತ ಪರಿಶ್ರಮ ನಿರಂತರ ಪ್ರಯತ್ನ ದಿಂದ ಯಶಸ್ಸು ಸಾಧ್ಯ ಎಂಬುದನ್ನು ತಿಳಸುತ್ತಾ,ನಾಲ್ಕನೆಯ ರೂಪಣಾತ್ಮಕ ಮೌಲ್ಯಮಾಪನಕ್ಕೆ ವಿಷಯವಾರು ರಸಪ್ರಶ್ನೆ ನಡೆಸುವುದಾಗಿ ತಿಳಿಸಿ ಮಕ್ಕಳನ್ನು ಓದಿಗೆ ತೊಡಗಿಸಲಾಯಿತು.

ಸಮಯದ ಸದ್ಭಳಕೆ

 ಶಾಲೆಯ ಪ್ರಾರಂಭಕ್ಕೆ ಮುಂಚೆ ಹಾಗೂ ನಂತರದ ಸಮಯವನ್ನು ನಮ್ಮ ವಿದ್ಯಾರ್ಥಿಗಳು ಸ್ವಯಂ ಶಿಸ್ತಿನಿಂದ ಮುಖ್ಯ  ಶಿಕ್ಷಕರ  ಹಾಗೂ ಶಿಕ್ಷಕರ  ನೆರವಿನಿಂದ ಸ್ವ ಅಧ್ಯಯನದ ಮೂಲಕ ಸದ...