🙏🙏 **ಸರ್ಕಾರಿ ಪ್ರೌಢಶಾಲೆ ಅಂಕನಹಳ್ಳಿಯ ಶೈಕ್ಷಣಿಕ ಜಾಲತಾಣಕ್ಕೆ ಆತ್ಮೀಯ ಸ್ವಾಗತ.**🙏🙏

Thursday, 31 December 2015

ವಿಶೇಷರಲ್ಲ !........ವಿಶ್ವಮಾನವರಾಗೋಣ.

      ವಿಶ್ವಮಾನವ ದಿನಾಚರಣೆ ೨೯-೧೨-೨೦೧೫


ರಸ ಋಷಿ,ರಾಷ್ಟ್ರಕವಿ ಕುವೆಂಪುರವರ ಜನ್ಮದಿನವನ್ನು ನಮ್ಮ ಶಾಲೆಯಲ್ಲಿ ಅರ್ಥಪೂರ್ಣವಾಗಿ ಆಚರಿಸುವ
ಸಂಬಂಧ ಪ್ರಾರ್ಥನೆಯ ಗೀತೆಯೊಂದಿಗೆ ವಿಶ್ವಮಾನವ ಗೀತೆಯನ್ನು ಹಾಡಲಾಯಿತು.ವಿಶ್ವಮಾನವ ಸಂದೇಶದಲ್ಲಿ ವಿಶ್ವಮಾನವರಾಗಲು ಸಪ್ತಸೂತ್ರಗಳು ಹಾಗೂ ಪಂಚಮಂತ್ರಗಳನ್ನು ತಿಳಿಸಲಾಯಿತು. ವಿಶೇಷರಾಗುದಿಲ್ಲಾ,ವಿಶ್ವಮಾನವರಾಗುತ್ತೆೇವೆ ಎಂದು     ವಿದ್ಯಾರ್ಥಿಗಳು ಅನಿಸಿಕೆ ವ್ಯಕ್ತಪಡಿಸಿದ್ದು ವಿಶೇಷವಾಗಿತ್ತು.










ಮಕ್ಮಕ್ವಿದ್ದ್ಯಾರ್ರ್ರ್ರೃೃ


Tuesday, 29 December 2015

ಮರಳಿ ಯತ್ನವ ಮಾಡು.ಮರಳಿ ಯತ್ನವ ಮಾಡು.......


ಹತ್ತನೆಯ ತರಗತಿಯ ಪಠ್ಯಕ್ರಮ ಈಗಾಗಲೇ ಮುಗಿಯುವ ಹಂತದಲ್ಲದ್ದು ವಿದ್ಯಾರ್ಥಿಗಳನ್ನು ಅಧಿಕೃತವಾಗಿ ಅಧ್ಯಯನದಲ್ಲಿ ತೊಡಗಿಸುವ ಸಲುವಾಗಿ ಎಲ್ಲಾ ವಿಷಯಗಳ ಆಧರಿಸಿ ರಸಪ್ರಶ್ನೆ ಏರ್ಪಡಿಸಲಾಗಿತ್ತು.ಪ್ರಥಮ ಸ್ಥಾನ ವಂಚಿತರಾದ ವಿದ್ಯಾರ್ಥಿಗಳು ಮುಂದಿನ ರಸಪ್ರಶ್ನೆಯಲ್ಲಿ ಕ್ರಮಬದ್ಧ ಅಧ್ಯಯನ ನಡೆಸಿ ನಾವೂ ಪ್ರಥಮ ಸ್ಥಾನ ಪಡೆಯುವುದಾಗಿ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಸತತ ಪರಿಶ್ರಮ ನಿರಂತರ ಪ್ರಯತ್ನ ದಿಂದ ಯಶಸ್ಸು ಸಾಧ್ಯ ಎಂಬುದನ್ನು ತಿಳಸುತ್ತಾ,ನಾಲ್ಕನೆಯ ರೂಪಣಾತ್ಮಕ ಮೌಲ್ಯಮಾಪನಕ್ಕೆ ವಿಷಯವಾರು ರಸಪ್ರಶ್ನೆ ನಡೆಸುವುದಾಗಿ ತಿಳಿಸಿ ಮಕ್ಕಳನ್ನು ಓದಿಗೆ ತೊಡಗಿಸಲಾಯಿತು.

Saturday, 19 December 2015

ಹತ್ತು. ಮುಗೀತಾ,,,,? ಮತ್ತೇನು.......?

ಹೌದು,ಹತ್ತನೆಯ ತರಗತಿಯವರೆಗೆ ಸಂಕುಚಿತವಾಗಿದ್ದ ವಿದ್ಯಾಕ್ಷೇತ್ರ ನಂತರ ಹಲವಾರು ಕೊಂಬೆಗಳಾಗಿ ಕವಲೊಡೆದು ವಿಸ್ತಾರತೆಯನ್ನು ಪಡೆದುಕೊಳ್ಳುತ್ತದೆ.ಈ ವಿಶಾಲ ಸಾಗರದಲ್ಲಿ ನಿರ್ದಿಷ್ಟ ಮಾರ್ಗದಲ್ಲಿ ಮುನ್ನಡೆಯಲು ಇದುವರೆಗೆ ಬಾವಿಯೊಳಗಿನ ಕಪ್ಪೆಗಳಂತಿರುವ ಹತ್ತನೆಯ ತರಗತಿಯ ವಿದ್ಯಾರ್ಥಿಗಳಿಗೆ ಮುಂದೆ ತಾವು ಯಾವ ಕೋರ್ಸ್ ಆಯ್ಕೆ ಮಾಡಿಕೊಳ್ಳಬೇಕು,ಅದು ಯಾವ ಕ್ಷೇತ್ರಕ್ಕೆ ಸೇರಲು ನೆರವಾಗುತ್ತದೆ, ಹಾಗು ಗಳಿಸುತ್ತಾ ಕಲಿಯುವ ಬಗೆ ಹೇಗೆ ಎಂಬಿತ್ಯಾದಿ ಹತ್ತು ಹಲವು ಪ್ರಶ್ನೆ,ಆತಂಕಗಳಿಗೆ ಪರಿಹಾರಾತ್ಮಕವಾಗಿ ನಮ್ಮ ಶಾಾಲೆಯಲ್ಲಿ "ಎಸ್.ಎಸ್.ಎಲ್.ಸಿ.ನಂತರ ಮುಂದೇನು" ಎಂಬ ವಿನೂತನ ಕಾರ್ಯಕ್ರಮ ವನ್ನುಶಾಲೆಯ ಮುಖ್ಯಶಿಕ್ಷಕರ ಮಾರ್ಗದರ್ಶನದಲ್ಲಿ,ಎಲ್ಲಾಶಿಕ್ಷಕರ ಸಹಭಾಗಿತ್ವದಲ್ಲಿ ಕೈಗೊಂಡು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಲಾಯಿತು. ಅಲ್ಲದೆ ಮೇಣದಬತ್ತಿಯ ತಯಾರಿಕೆಯ ವಿಧಾನವನ್ನು ಪ್ರಾಯೋಗಿಕ ವಾಗಿ ತಿಳಿಸಿಕೊಡಲಾಯಿತು.







https://docs.google.com/document/d/1XdX88gmY-uBnO2lP4vQONcweQPWFwIR75s2vq-MRdRs/edit?usp=docslist_api






 ಮುಖ್ಖ್ಲೆ್

Tuesday, 15 December 2015

ದಿನಕ್ಕೊಂದು ಪರಿಕಲ್ಪನೆ

ಇಂದು ನಮ್ಮ ಶಾಲೆಯಲ್ಲಿ ಪ್ರಾರ್ಥನೆಯ ಅವಧಿಯಲ್ಲಿ ಪುಸ್ತಕ ಪರಿಚಯದ ಬದಲಿಗೆ 'ದಿನಕ್ಕೊಂದು' ಪರಿಕಲ್ಪನೆ ಹೆಸರಿನಲ್ಲಿ ಪ್ರತಿ ದಿನ ಒಂದೊಂದು ವಿಷಯದಲ್ಲಿ ಒಂದೊಂದು ಪರಿಕಲ್ಪನೆ ಪ್ರಸ್ತುತ ಪಡಿಸಲು ೧೦ ನೆಯ ತರಗತಿ ವಿದ್ಯಾರ್ಥಿಗಾಿಂದ. ಪ್ರಾರಭಿಸಲಾಯಿತು.ಈ ಪರಿಕಲ್ಪನೆಯು ೧೦ ನೆಯ ತರಗತಿಯಲ್ಲಿ ಕ್ಲಿಷ್ಟ ಅಂಶಗಳ ಪುನರಾವರ್ತನೆ ಗೆ ಸಹಾಯಕ ವಾಗಿ ಪರೀಕ್ಷೆಗೆ ನೆರವಾಗುತ್ತದೆ ಎಂಬುದುಬುದು ನಮ್ಮೆಲ್ಲರ  ಆಶಯ.


Thursday, 10 December 2015

ಸ್ವಾಗತ

ಇದು ನಮ್ಮ ಶಾಲೆಯ ಬ್ಲಾಗ್. ಇಂದು ಲೋಕಾರ್ಪಣೆಗೊಳ್ಳುತ್ತಿದೆ. ಇದು ನಮ್ಮ ವಿದ್ಯಾರ್ಥಿಗಳ ಕನಸು-ಶಿಕ್ಷಕರ ಮನಸುಗಳ ತೆರೆದ ಪುಸ್ತಕ.ನೀವು ಓದಿನಿಮ್ಮವರನ್ನೂ ಓದಿಸಿ. ಸಲಹೆ ನೀಡಿರಿ.

ನಿಮ್ಮ ಸಾಮರ್ಥ್ಯದ ಮೇಲೆ ನಿಮಗೆ ನಂಬಿಕೆಯಿರಲಿ.

ಪ್ರತಿಭಾ ಪುರಸ್ಕಾರ 2024-25 (2023-24 ನೆಯ ಸಾಲಿನ SSLC ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಅಭಿನಂದನೆ ) ದಿನಾಂಕ 13-07-2024 ರ ಶನಿವಾರದಂದು ಶಾಲೆ...