Thursday, 29 August 2019
ಜಿಲ್ಲಾ ಮಟ್ಟಕ್ಕೆ ಆಯ್ಕೆ.
ದಿನಾಂಕ ೨೮-೦೮-೨೦೧೯ ರಂದು ಕೆ. ಆರ್.ನಗರದಲ್ಲಿ ನಡೆದ ತಾಲ್ಲೂಕು ಮಟ್ಟದ ಕ್ರೀಡಾಕೂಟದಲ್ಲಿ ಬಾಲಕಿಯರ ಬಾಲ್ ಬ್ಯಾಟ್ ಮಿಂಟನ್ ನಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಈ ತಂಡಕ್ಕೆ ಹಾಗೂ ತಂಡದ ತರಭೇತುದಾರರಿಗೆ ಶಾಲೆಯ ವತಿಯಿಂದ ಅಭಿನಂದನೆಗಳು.
ಪತ್ರಿಕೆಗಳಲ್ಲಿ ನಮ್ಮ ತಂಡ.
Friday, 1 February 2019
ತಾಲ್ಲೂಕು ಮಟ್ಟದ ರಸಪ್ರಶ್ನೆಯಲ್ಲಿ ದ್ವಿತೀಯ ಸ್ಥಾನ.
ದಿನಾಂಕ 18-01-2019 ರಂದು ಸರ್ಕಾರಿ ಪ್ರೌಢಶಾಲೆ ಮಾವತ್ತೂರಿನಲ್ಲಿ ನಡೆದ ಕೆ.ಆರ್.ನಗರ ತಾಲ್ಲೂಕು ಮಟ್ಟದ ರಸಪ್ರಶ್ನೆಯಲ್ಲಿ ನಮ್ಮ ಶಾಲೆಯ 10ನೆಯ ತರಗತಿಯ ವಿದ್ಯಾರ್ಥಿಗಳು ಭಾಗವಹಿಸಿ ದ್ವಿತೀಯ ಸ್ಥಾನ ಗಳಿಸಿದರು.
ನಗರ ಪ್ರದೇಶದ ಮಕ್ಕಳೊಂದಿಗೆ ಸ್ಪರ್ಧಿಸಿ ಬಹುಮಾನ ಪಡೆದ ಗ್ರಾಮೀಣ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.
Thursday, 31 January 2019
ಶೇಕಡಾ 100 ಫಲಿತಾಂಶಕ್ಕಾಗಿ ಸನ್ಮಾನಗೊಂಡ ಕ್ಷಣ.
2017-18 ನೆಯ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೆ.100 ಫಲಿತಾಂಶ ಪಡೆದ ಕಾರಣ ಕೆ.ಆರ್. ನಗರ ತಾಲ್ಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ನಮ್ಮ ಶಾಲೆಯ ಮುಖ್ಯಶಿಕ್ಷಕರಾದ ಶ್ರೀಮತಿ ಶೈಲಜಾಕುಮಾರಿಯವರು ಪ್ರವಾಸೋಧ್ಯಮ ಮತ್ತು ರೇಷ್ಮೆ ಇಲಾಖೆ ಸಚಿವರಾದ ಶ್ರೀಯುತ ಸಾ.ರಾ. ಮಹೇಶ್ ರವರಿಂದ ಸನ್ಮಾನಗೊಂಡ ಅವಿಸ್ಮರಣೀಯ ಕ್ಷಣ.
ಈ ಕ್ಷಣಕ್ಕೆ ನಮ್ಮೆಲ್ಲರನ್ನು ಅರ್ಹರನ್ನಾಗಿಸಲು ಶ್ರಮಿಸಿದ ವಿದ್ಯಾರ್ಥಿಗಳು, ಪ್ರತಿ ಕ್ಷಣದಲ್ಲೂ ಪ್ರೋತ್ಸಾಹಿಸಿ ಸೂಕ್ತ ಸಲಹೆ ನೀಡಿ ನಮ್ಮೊಂದಿಗೆ ದುಡಿದ ನಮ್ಮ ಶಾಲೆಯ ಈ ಹಿಂದಿನ ಮುಖ್ಯಶಿಕ್ಷಕರಾದ ಹಾಲಿ ಕೆ ಆರ್.ನಗರ ತಾ.. ಅಕ್ಷರ ದಾಸೊಹ ಸಹ ನಿರ್ದೇಶಕರಾದ ಶ್ರೀಯುತ ಪ್ರದೀಪ್ ಕುಮಾರ್ ಹಾಗೂ ಎಲ್ಲಾ ಶಿಕ್ಷಕ ಮಿತ್ತರು ಹಾಗೂ ಎಲ್ಲರಿಗೆ ಕೃತಜ್ಙತೆಗಳನ್ನು ಈ ಮೂಲಕ ಸಲ್ಲಿಸುತ್ತೇವೆ.

Subscribe to:
Posts (Atom)
ನಿಮ್ಮ ಸಾಮರ್ಥ್ಯದ ಮೇಲೆ ನಿಮಗೆ ನಂಬಿಕೆಯಿರಲಿ.
ಪ್ರತಿಭಾ ಪುರಸ್ಕಾರ 2024-25 (2023-24 ನೆಯ ಸಾಲಿನ SSLC ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಅಭಿನಂದನೆ ) ದಿನಾಂಕ 13-07-2024 ರ ಶನಿವಾರದಂದು ಶಾಲೆ...
-
ಪ್ರತಿಭಾ ಪುರಸ್ಕಾರ 2024-25 (2023-24 ನೆಯ ಸಾಲಿನ SSLC ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಅಭಿನಂದನೆ ) ದಿನಾಂಕ 13-07-2024 ರ ಶನಿವಾರದಂದು ಶಾಲೆ...