ಇಂದು 50ನೆಯ ವಿಶ್ವ ಪರಿಸರ ದಿನವನ್ನು "ಪ್ಲಾಸ್ಟಿಕ್ ಮಾಲಿನ್ಯಕ್ಕೆ ಪರಿಹಾರ ಕ್ರಮಗಳು ಹಾಗೂ ಜೀವನಶೈಲಿ " ಎಂಬ ಘೋಷ ವಾಕ್ಯದೊಂದಿಗೆ ಶಾಲಾ ಸುಂದರ ಉದ್ಯಾನವನಕ್ಕೆ ಮತ್ತಷ್ಟು ಹೊಸ ಸಸ್ಯ ಗಳನ್ನು ಸೇರಿಸುವುದರೊಂದಿಗೆ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀಯುತ ಸೋಮಶೇಖರ್ ರವರು ಮಾತನಾಡಿ ಪರಿಸರಕ್ಕೆ ಜೀವಿಗಳ ಅವಶ್ಯಕತೆಗಿಂತ ಜೀವಿಗಳಿಗೆ ಪರಿಸರದ ಅನಿವಾರ್ಯತೆ ಬಹಳ ಇದೆ.ಪ್ಲಾಸ್ಟಿಕ್ ನ ಬಳಕೆ ಮಿತಿಮೀರಿರುವುದ ಹಲವು ಜೀವ ಸಂಕುಲಗಳ ನಾಶಕ್ಕೆ, ಪರಿಸರ
ಮಾಲಿನ್ಯಕ್ಕೆ ಕಾರಣವಾಗುತ್ತಿದೆ.ವಿದ್ಯಾವಂತರಾದ ನಾವು ಮೊದಲು ಪ್ಲಾಸ್ಟಿಕ್ ವರ್ಜಿಸಿ ಮಾದರಿಯಾಗೋಣ ಹಾಗೂ ಮನವರಿಕೆ ಮಾಡಿಸೋಣ ಎಂದರು.
ಶಾಲೆಯ ವಿದ್ಯಾರ್ಥಿಗಳು ಹಾಗೂ ಶಿಕ್ಷಕವೃಂದ ಶಾಲಾವರಣವನ್ನು ಪ್ಲಾಸ್ಟಿಕ್ ಮುಕ್ತವನ್ನಾಗಿಸಲು ಪ್ರತಿಜ್ಞೆ ಕೈಗೊಳ್ಳಲಾಯಿತು.
೯ನೆಯ ತರಗತಿಯ ಸಿಂಚನ ಮತ್ತು ತಂಡದವರ ಪ್ರಾರ್ಥನೆ ಯೊಂದಿಗೆ ಆರಂಭವಾದ ಕಾರ್ಯಕ್ರಮ ದಲ್ಲಿ ಹಿಂದಿ ಶಿಕ್ಷಕಿಯವರಾದ ಶಾಹಿನ್ ಬಾನು ರವರು ಎಲ್ಲರನ್ನೂ ಸ್ವಾಗತಿಸಿದರು. ಅತಿಥಿ ಶಿಕ್ಷಕರಾದ ಶ್ರೀಯುತ ಸಾಗರ ಪರಿಸರ ದಿನಾಚರಣೆಯ ಪರಿಚಯ ಮಾಡಿಕೊಟ್ಡರು.ಕಾರ್ಯಕ್ರಮದಲ್ಲಿ ಗಣಿತ ಶಿಕ್ಷಕರಾದ ಶ್ರೀಯುತ ರಾಜು,ದೈಹಿಕ ಶಿಕ್ಷಣ ಶಿಕ್ಷಕರಾದ ಶ್ರೀಯುತ ಎಸ್ ಆರ್ ರಾಮಚಂದ್ರರವರು,ಕನ್ನಡ ಶಿಕ್ಷಕರಾದ ಎಲ್.ಈ.ಮಂಜುನಾಥ್, ತೋಟಗಾರಿಕೆ ಶಿಕ್ಷಕರಾದ ಎನ್.ಸಿ.ಪ್ರಕಾಶ್ ರವರು ಹಾಜರಿದ್ದು ಶ್ರೀಯುತ ಎಲ್.ಈ.ಮಂಜುನಾಥ್ ರವರು ಕಾರ್ಯಕ್ರಮ ನಿರೂಪಣೆ ಮಾಡಿದರು.ಮತ್ತೋರ್ವ ಅತಿಥಿ ಶಿಕ್ಷಕರಾದ ಶ್ರೀಯುತ ಪ್ರಜ್ವಲ್ ರವರು ಎಲ್ಲರಿಗೂ ವಂದಿಸಿದರು.
ಕಾರ್ಯಕ್ರಮವು ಪರಿಸರ ಮಾಲಿನ್ಯ ಕುರಿತಾದ ಸಾಕ್ಷ್ಯಚಿತ್ರ ಹಾಗೂ ಪರಿಸರಗೀತೆಗಳ ಪ್ರದರ್ಶನವನ್ನು ಒಳಗೊಂಡಿತ್ತು.
No comments:
Post a Comment