🙏🙏 **ಸರ್ಕಾರಿ ಪ್ರೌಢಶಾಲೆ ಅಂಕನಹಳ್ಳಿಯ ಶೈಕ್ಷಣಿಕ ಜಾಲತಾಣಕ್ಕೆ ಆತ್ಮೀಯ ಸ್ವಾಗತ.**🙏🙏

Tuesday, 16 July 2024

ನಿಮ್ಮ ಸಾಮರ್ಥ್ಯದ ಮೇಲೆ ನಿಮಗೆ ನಂಬಿಕೆಯಿರಲಿ.

ಪ್ರತಿಭಾ ಪುರಸ್ಕಾರ 2024-25

(2023-24 ನೆಯ ಸಾಲಿನ SSLC ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಅಭಿನಂದನೆ )

ದಿನಾಂಕ 13-07-2024 ರ ಶನಿವಾರದಂದು ಶಾಲೆಯಲ್ಲಿ  2023-24 ನೆಯ ಸಾಲಿನ SSLC ಪರೀಕ್ಷೆಯಲ್ಲಿ ಹೆಚ್ಚು ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳಿಗೆ ಅಭಿನಂದನೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು.
    ಮೈಸೂರು ವಿಶ್ವವಿದ್ಯಾನಿಲಯದ ಗಣಕಯಂತ್ರ ವಿಭಾಗದ ಪ್ರಾಧ್ಯಾಪಕರಾದ ಶ್ರೀಯುತ ಫ್ರೊ.ಡಿ.ಎಸ್.‌ ಗುರು ರವರು ತಮ್ಮ ತಂದೆಯವರಾದ ಶ್ರೀಯುತ‌ ಡಿ.ಎಮ್. ಶಾಂತಬಸವಯ್ಯ ( ಗಣಿತ ಶಿಕ್ಷಕರು ) ಇವರ  ಸ್ಮರಣಾರ್ಥ  ಗಣಿತ ವಿಷಯದಲ್ಲಿ ಹೆಚ್ಚು ಅಂಕಗಳಿಸಿದ ರಾಹುಲ್‌ , ಸಿಂಚನ ಬಿ.ವಿ., ಸ್ಫೂರ್ತಿಈ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ (ನಗದು ರೂಪದಲ್ಲಿ) ನಡೆಸಿಕೊಟ್ಟರು. ಅಲ್ಲದೆ   ಶ್ರೀಯುತರು ಕಳೆದ ಕೆಲವು ವರ್ಷಗಳಿಂದ ನಮ್ಮ ಶಾಲೆಯ ಎಲ್ಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟಕ್ಕೆ  ಪ್ರತಿದಿನ ಮಜ್ಜಿಗೆ ಒದಗಿಸುತ್ತಿರುವುದು ಶ್ಲಾಘನೀಯ.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲೆಯ ಮುಖ್ಯಶಿಕ್ಷಕರಾದ ಶ್ರೀಯುತ  ಸೋಮಶೇಖರ್‌ ರವರು ಮಾತನಾಡಿ  ಪ್ರತಿಯೊಬ್ಬರು ಶೈಕ್ಷಣಿಕ ವರ್ಷದ ಪ್ರಾರಂಭದಿಂದಲೇ ಶಿಸ್ತುಬದ್ಧ ಹಾಗೂ ಕ್ರಮಬದ್ಧ ಸಾಮಾನ್ಯ ಅಧ್ಯಯನ ಮಾಡಿದರೆ ಸಾಕು ಉತ್ತಮ ಸಾಧನೆ ಮಾಡಬಹುದು. ಹಾಗಾಗಿ ಪ್ರತಿಯೊಬ್ಬರೂ ತಮ್ಮ ಸ್ವಸಾಮರ್ಥ್ಯದ ಮೇಲೆ ನಂಬಿಕೆಯಿಟ್ಟು ಈಗಿನಿಂದಲೇ ಅಧ್ಯಯನ ಮಾಡಬೇಕು ಎಂದು ಸಲಹೆ ನೀಡಿದರು. ಅಲ್ಲದೆ 2023-24 ನೆಯ ಸಾಲಿನ SSLC ಯಲ್ಲಿ ಅತಿಹೆಚ್ಚು ಅಂಕಗಳಿಸಿದ ಪಲ್ಲವಿ ಯನ್ನು ಶಾಲೆಯ ವತಿತಿಂದ ಅಭಿನಂದಿಸಿ ಪ್ರತಿಭಾ ಪುರಸ್ಕಾರ ನೆರವೇರಿಸಿದರು

 ಶಾಲೆಯ ಎಸ್‌ ಡಿ.ಎಂ.ಸಿ ಅಧ್ಯಕ್ಷರಾದ ಶ್ರೀಯುತ ಮಹದೇವ ರವರು ಶಿಕ್ಷಕರಾದ ಶ್ರೀಯುತ  ಸಿ.ಎಸ್.ರಾಜು, ಡಿ ಶಿವಕುಮಾರ್‌ , ಎಲ್ ಈ ಮಂಜುನಾಥ್‌ ಅತಿಥಿ ಶಿಕ್ಷಕರುಗಳಾದ ಸಾಗರ್‌ ಹಾಗೂ ಜಬೀನಾಭಾನು ಪ್ರಥಮದರ್ಜೆ ಸಹಾಯಕರಾದ ಹರೀಶ್‌ ಕಛೇರಿ ಸಹಾಯಕರಾದ ದಯಾನಂದ ಕುಮಾರ್‌ ಉಪಸ್ಥಿತರಿದ್ದ ಕಾರ್ಯಕ್ರಮದಲ್ಲಿ ಡಿ ಶಿವಕುಮಾರ್‌ ಎಲ್ಲರನ್ನೂ ಆತ್ಮೀಯವಾಗಿ ಸ್ವಾಗತಿಸಿದರು ಎಲ್‌ ಈ ಮಂಜುನಾಥ್‌ ರವರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಕಳೆದ ವರ್ಷದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮುಂದಿನ ವರ್ಷದ ಪ್ರತಿಭಾ ಪುರಸ್ಕಾರಕ್ಕೆ ನಾನೇ ಶಾಲೆಗೆ ಮೊದಲಿಗಳಾಗಿ ಭಾಗವಹಿಸುತ್ತೇನೆ ಎಂದು ವಾಗ್ದಾನ ಮಾಡಿದ್ದ ಪಲ್ಲವಿಯೇ ಈ ವರ್ಷದ ಫಲಿತಾಂಶದಲ್ಲಿ ಮೊದಲಿಗಳಾಗಿ ಅಭಿನಂದನೆ ಸ್ವೀಕರಿಸದ್ದು ವಿಶೇಷವಾಗಿತ್ತು.

Thursday, 30 November 2023

10 ನೆಯ ತರಗತಿ ಸಮಾಜ ವಿಜ್ಞಾನ ಅಭ್ಯಾಸದ ಹಾಳೆಗಳು

10 ನೆಯ ತರಗತಿ ತೃತೀಯ ಭಾಷೆ ಹಿಂದಿ ಅಭ್ಯಾಸದ ಹಾಳೆಗಳು

10 ನೆಯ ತರಗತಿ ಗಣಿತ ಅಭ್ಯಾಸದ ಹಾಳೆಗಳು

10 ನೆಯ ತರಗತಿ ವಿಜ್ಞಾನ ಅಭ್ಯಾಸದ ಹಾಳೆಗಳು

10 ನೆಯ ತರಗತಿ ದ್ವಿತೀಯ ಭಾಷೆ ಇಂಗ್ಲೀಷ್‌ ಅಭ್ಯಾಸದ ಹಾಳೆಗಳು

ಅರ್ಥವಿಲ್ಲದ ಸಿನಿಮಾ ಹಾಡುಗಳ ಬದಲು ಬದುಕಿಗೆ ದಾರಿ ತೋರಿಸುವ ಕೀರ್ತನೆಗಳ ಕಲಿಕೆ ಆರೋಗ್ಯಕರ.

   ಕನಕದಾಸ ಜಯಂತಿ.                                                                  30-11-2023


ದಾಸ ಶ್ರೇಷ್ಠರ ಕೀರ್ತನೆಗಳು ಬದುಕಿಗೆ ದಾರಿ  ತೋರಿಸುವ ದೀವಿಗೆಗಳಂತಿದ್ದು ಜೀವನದ ಕೆಲವು ಕ್ಲಿಷ್ಠ ಸಂದರ್ಭಗಳಲ್ಲಿ ಸೂಕ್ತ ನಿರ್ಧಾರಕ್ಕೆ ಮಾರ್ಗದರ್ಶನ ಮಾಡುತ್ತವೆ ಎಂದು ಶಾಲೆಯ ಮುಖ್ಯಶಿಕ್ಷರಾದ ಶ್ರೀಯುತ ಸೋಮಶೆಖರ್‌ ರವರು ದಿನಾಂಕ 30-11-2023 ರಂದು ಕನಕದಾಸ ಜಯಂತಿ ಕಾರ್ಯಕ್ರಮದ ಅಧ್ಯಕ್ಷೀಯ ಭಾಷಣದಲ್ಲಿ ಅಭಿಪ್ರಾಯ ಪಟ್ಟರು.

ಶಾಲೆಯಲ್ಲಿ ಕನಕದಾಸರ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

ಹತ್ತನೆಯ ತರಗತಿಯ ವಿದ್ಯಾರ್ಥಿನಿಯರ ದೈವತಾ ಸ್ತುತಿಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆದೊರಕಿತು.ಕಾರ್ಯಕ್ರಮದ ನಿರೂಪಣೆಯಿಂದ ವಂದನಾರ್ಪಣೆವರೆಗೆ ವಿದ್ಯಾರ್ಥಿಗಳೆ ನಿರ್ವಹಿಸಿದ್ದು ವಿಶೇಷವಾಗಿತ್ತು.

ಕನಕದಾಸ ಜಯಂತಿಯ ಆಚರಣೆ, ಉದ್ದೇಶ,ಕನಕರ ಜೀವನ ಚರಿತ್ರೆ,ಬಾಲ್ಯ, ತಿಮ್ಮಪ್ಪನಾಯಕರು,ಕನಕನಾಯಕ ಹಾಗೂ ಕನಕದಾಸರಾದ ಬಗೆ,ಅವರ ಕೀರ್ತನೆಗಳು ,ಸಾಹಿತ್ಯ ಕೃತಿಗಳನ್ನು ವಿದ್ಯಾರ್ಥಿಗಳಾದ ಗೌತಮ್‌,ಮನೋಜ್‌,ಪಲ್ಲವಿ,ಚಿನ್ನು,ಚಂದ್ರಶೇಖರ್‌,ಧನುಷ್‌ ಮುಂತಾದ ವಿದ್ಯಾರ್ಥಿಗಳು ವಿವರಣಾತ್ಮಕವಾಗಿ ತಿಳಿಸಿಕೊಟ್ಟರು.


ಶಾಲೆಯ ಶಿಕ್ಷಕರಾದ ಶ್ರೀಯುತ ರಾಜು ಸಿ.ಎಸ್‌, ಮಂಜುನಾಥ.ಎಲ್.‌ ಈ. ಶಿವಕುಮಾರ್.ಡಿ.ಎಸ್.‌ ಮತ್ತು ಸಾಗರ್.ಸಿ.ಎಸ್.ರವರು ಹಾಗೂ ಪ್ರಥಮದರ್ಜೆ ಸಹಾಯಕರಾದ ಹರೀಶ್‌ ಮತ್ತು ಕಛೇರಿ ಸಹಾಯಕರಾದ ದಯಾನಂದ್‌ ರವರು ಹಾಜರಿದ್ದು ಕನಕದಾಸರ ಕೃತಿಗಳ ರಚನೆ,ಒಳಗೊಂಡಿರುವ ಸಾಹಿತ್ಯಿಕ ಅಂಶಗಳು,ಪರಿಚಯಿಸಿ ಕನಕದಾಸರ ಕೀರ್ತನೆಗಳ ಮಹತ್ವ ತಿಳಿಸಿಕೊಟ್ಟರು.

                          

8ನೆಯ ತರಗತಿಯ ವಿದ್ಯಾರ್ಥಿನಿಯರು ಕಾರ್ಯಕ್ರಮದ ಉದ್ದಕ್ಕೂ ಕನಕರ ಕೀರ್ತನೆಗಳನ್ನು ಪ್ರಸ್ತುತಪಡಿಸಿದ್ದು ಕಾರ್ಯಕ್ರಮಕ್ಕೆ ಮೆರಗು ನೀಡಿತು.ವಿದ್ಯಾರ್ಥಿಗಳು ವಾಚಿಸಿದ ಕೀರ್ತನೆಗಳನ್ನು ಧ್ವನಿಸುರುಳಿಗಳ ಮೂಲಕ ಎಲ್ಲರಿಗೂ ಕೇಳಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಲೆಯ ಮುಖ್ಯಶಿಕ್ಷಕರು 12 ನೆಯ ಶತಮಾನದ ವಚನ ಸಾಹಿತ್ಯ ಹಾಗೂ 15 ನೆಯ ಶತಮಾನದ ದಾಸಸಾಹಿತ್ಯ ಪರಂಪರೆಗಳು ಕನ್ನಡ ಸಾಹಿತ್ಯಕ್ಷೇತ್ರದಲ್ಲಿ ಗಣನೀಯ ಪಾತ್ರವಹಿಸುತ್ತವೆ.ಎಂದು ತಿಳಿಸಿದರು. ಈ ಎರಡು ಪರಂಪರೆಗಳು ಜನ ಸಾಮಾನ್ಯರಿಗೂ ತಲುಪುವಂತೆ ವಚನ ಕಾರರ ಮತ್ತು ದಾಸರುಗಳ ತಮ್ಮಸಾಹಿತ್ಯರಚನೆಗಳಿದ್ದವು.

ಕೀರ್ತನೆಗಳು ಅರ್ಥಪೂರ್ಣ ರಚನೆಗಳಾಗಿದ್ದು ವಿದ್ಯಾರ್ಥಿಗಳು ಅನರ್ಥ ಸೃಷ್ಟಿಸುವ ಸಿನಿಮಾ ಹಾಡುಗಳನ್ನು ಕಲಿಯುವ ಬದಲು ಕೀರ್ತನೆಗಳನ್ನು ಆಳಿಸಿ ಕಲಿಯುವುದರಿಂದ ಶೈಕ್ಷಣಿಕವಾಗಿಯೂ ಉಪಯುಕ್ತವಾಗಿವೆ ಎಂದು ಮಾರ್ಗದರ್ಶನ ಮಾಡಿದರು.

10 ನೆಯ ತರಗತಿಯ ವಿದ್ಯಾರ್ಥಿ ರಾಹುಲ್‌ ಕಾರ್ಯಕ್ರಮ ನಿರೂಪಿಸಿ 9ನೆಯ ತರಗತಿಯ ವೇದಾವತಿ ಎಲ್ಲರಿಗೂ ಧನ್ಯವಾದ ಸಮರ್ಪಿಸಿದರು.


 

Monday, 27 November 2023

ಸಂವಿಧಾನ ದಿನ , ದಿನಾಂಕ 27/11/2023.

 ಸಂವಿಧಾನ ದಿನ , ದಿನಾಂಕ 27/11/2023.

ಸರ್ಕಾರಿ ಪ್ರೌಢ ಶಾಲೆ ಅಂಕನಹಳ್ಳಿ (ಚುಂ) ಸಾಲಿಗ್ರಾಮ ತಾಲೂಕು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮೈಸೂರುರವರ ಪತ್ರ ಸಂಖ್ಯೆ:ಜಿಕಾಸೇಪ್ರಾ/ಮೈ/862/2023 ದಿನಾಂಕ20/11/2023ರ ಅನ್ವಯ 

ದಿನಾಂಕ 27/11/2023ರಂದು ಶಾಲೆಯಲ್ಲಿ ಸಂವಿಧಾನ ದಿನದ ಪ್ರಯುಕ್ತ ವಿದ್ಯಾರ್ಥಿಗಳಿಗೆ ಸಂವಿಧಾನ ಪೀಠಿಕೆ ಓದಿಸಿ ಮೂಲಭೂತ ಹಕ್ಕುಗಳ ಮತ್ತು ಕರ್ತವ್ಯಗಳ ಬಗ್ಗೆ ಸಂಕ್ಷಿಪ್ತವಾಗಿ ತಿಳಿಸಲಾಯಿತು.

ವಿದ್ಯಾರ್ಥಿಗಳಿಗೆ ಸಂವಿಧಾನ ಪೀಠಿಕೆ ಓದಿಸಿ ಮೂಲಭೂತ ಹಕ್ಕುಗಳ ಮತ್ತು ಕರ್ತವ್ಯಗಳ ಬಗ್ಗೆ ಸಂಕ್ಷಿಪ್ತವಾಗಿ ತಿಳಿಸಲಾಯಿತು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಮುಖ್ಯಶಿಕ್ಷಕರಾದ ಶ್ರೀಯುತ ಸೋಮಶೇಖರ್ ರವರು ವಹಿಸಿದ್ದರು.

ನಮ್ಮ ಶಾಲೆಯ ವಿದ್ಯಾರ್ಥಿಗಳಾದ ಗೌತಮ್ , ಮನೋಜ್ , ಕೃತಿಕಾ , ಪ್ರೀತು , ವೇದಾವತಿ ಹಾಗೂ ತ್ರಿವೇಣಿ ರವರು ಸಂವಿಧಾನ ದಿನ ಕುರಿತು ಭಾಷಣ ಮಾಡಿದರು

ಶಾಲೆಯ ವಿಜ್ಞಾನ ಶಿಕ್ಷಕರಾದ ಶ್ರೀಯುತ ಶಿವಕುಮಾರ್ ಡಿ ಎಸ್ ರವರು ಸಂವಿಧಾನ ದಿನದ ಕುರಿತು ಭಾಷಣ ಮಾಡಿದರು.

ಸಮಾಜ ವಿಜ್ಞಾನ ಶಿಕ್ಷಕರಾದ ಶ್ರೀಯುತ ಸಾಗರ್ ರವರು ಸಂವಿಧಾನದ ದಿನ , ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳ ಬಗ್ಗೆ ಕುರಿತು ಮಾತನಾಡಿದರು.

ಸಂವಿಧಾನ ದಿನದ ಕಾರ್ಯಕ್ರಮ ಅಧ್ಯಕ್ಷತೆ  ವಹಿಸಿ ಮಾತನಾಡಿದ ಮುಖ್ಯ ಶಿಕ್ಷಕರಾದ ಶ್ರೀಯುತ ಸೋಮಶೇಖರ್ ರವರು ಸಂವಿಧಾನ ದಿನದ ಮಹತ್ವ , ಸಂವಿಧಾನದ ರಚನೆ , ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳ ಬಗ್ಗೆ ತಿಳಿಸಿದರು.

ಕಾರ್ಯಕ್ರಮದಲ್ಲಿ ಶಿಕ್ಷಕರಾದ ಶ್ರೀಯುತ ರಾಜು ಸಿ ಎಸ್ ರವರು ಹಾಗೂ ಸಿಬ್ಬಂದಿ ದಯಾನಂದರವರು ಉಪಸ್ಥಿತರಿದ್ದರು.

ನಮ್ಮ ಶಾಲೆಯ ವಿದ್ಯಾರ್ಥಿನಿಯರಾದ ಸಿಂಚನರವರು ಕಾರ್ಯಕ್ರಮದ ಕುರಿತು ನಿರೂಪಣೆ ಮಾಡಿದರು ಪ್ರೀತುರವರು ಸ್ವಾಗತ ಕೋರಿದರು ಮಾನ್ಯರವರ ವಂದನಾರ್ಪಣೆ ಮಾಡಿದರು.

ENGLISH PASSING PACKAGE -2

ನಿಮ್ಮ ಸಾಮರ್ಥ್ಯದ ಮೇಲೆ ನಿಮಗೆ ನಂಬಿಕೆಯಿರಲಿ.

ಪ್ರತಿಭಾ ಪುರಸ್ಕಾರ 2024-25 (2023-24 ನೆಯ ಸಾಲಿನ SSLC ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಅಭಿನಂದನೆ ) ದಿನಾಂಕ 13-07-2024 ರ ಶನಿವಾರದಂದು ಶಾಲೆ...