ಪ್ರತಿಭಾ ಪುರಸ್ಕಾರ 2024-25
(2023-24 ನೆಯ ಸಾಲಿನ SSLC ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಅಭಿನಂದನೆ )
ದಿನಾಂಕ 13-07-2024 ರ ಶನಿವಾರದಂದು ಶಾಲೆಯಲ್ಲಿ 2023-24 ನೆಯ ಸಾಲಿನ SSLC ಪರೀಕ್ಷೆಯಲ್ಲಿ ಹೆಚ್ಚು ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳಿಗೆ ಅಭಿನಂದನೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು.
ಮೈಸೂರು ವಿಶ್ವವಿದ್ಯಾನಿಲಯದ ಗಣಕಯಂತ್ರ ವಿಭಾಗದ ಪ್ರಾಧ್ಯಾಪಕರಾದ ಶ್ರೀಯುತ ಫ್ರೊ.ಡಿ.ಎಸ್. ಗುರು ರವರು ತಮ್ಮ ತಂದೆಯವರಾದ ಶ್ರೀಯುತ ಡಿ.ಎಮ್. ಶಾಂತಬಸವಯ್ಯ ( ಗಣಿತ ಶಿಕ್ಷಕರು ) ಇವರ ಸ್ಮರಣಾರ್ಥ ಗಣಿತ ವಿಷಯದಲ್ಲಿ ಹೆಚ್ಚು ಅಂಕಗಳಿಸಿದ ರಾಹುಲ್ , ಸಿಂಚನ ಬಿ.ವಿ., ಸ್ಫೂರ್ತಿಈ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ (ನಗದು ರೂಪದಲ್ಲಿ) ನಡೆಸಿಕೊಟ್ಟರು. ಅಲ್ಲದೆ ಶ್ರೀಯುತರು ಕಳೆದ ಕೆಲವು ವರ್ಷಗಳಿಂದ ನಮ್ಮ ಶಾಲೆಯ ಎಲ್ಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟಕ್ಕೆ ಪ್ರತಿದಿನ ಮಜ್ಜಿಗೆ ಒದಗಿಸುತ್ತಿರುವುದು ಶ್ಲಾಘನೀಯ.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲೆಯ ಮುಖ್ಯಶಿಕ್ಷಕರಾದ ಶ್ರೀಯುತ ಸೋಮಶೇಖರ್ ರವರು ಮಾತನಾಡಿ ಪ್ರತಿಯೊಬ್ಬರು ಶೈಕ್ಷಣಿಕ ವರ್ಷದ ಪ್ರಾರಂಭದಿಂದಲೇ ಶಿಸ್ತುಬದ್ಧ ಹಾಗೂ ಕ್ರಮಬದ್ಧ ಸಾಮಾನ್ಯ ಅಧ್ಯಯನ ಮಾಡಿದರೆ ಸಾಕು ಉತ್ತಮ ಸಾಧನೆ ಮಾಡಬಹುದು. ಹಾಗಾಗಿ ಪ್ರತಿಯೊಬ್ಬರೂ ತಮ್ಮ ಸ್ವಸಾಮರ್ಥ್ಯದ ಮೇಲೆ ನಂಬಿಕೆಯಿಟ್ಟು ಈಗಿನಿಂದಲೇ ಅಧ್ಯಯನ ಮಾಡಬೇಕು ಎಂದು ಸಲಹೆ ನೀಡಿದರು. ಅಲ್ಲದೆ 2023-24 ನೆಯ ಸಾಲಿನ SSLC ಯಲ್ಲಿ ಅತಿಹೆಚ್ಚು ಅಂಕಗಳಿಸಿದ ಪಲ್ಲವಿ ಯನ್ನು ಶಾಲೆಯ ವತಿತಿಂದ ಅಭಿನಂದಿಸಿ ಪ್ರತಿಭಾ ಪುರಸ್ಕಾರ ನೆರವೇರಿಸಿದರು
ಶಾಲೆಯ ಎಸ್ ಡಿ.ಎಂ.ಸಿ ಅಧ್ಯಕ್ಷರಾದ ಶ್ರೀಯುತ ಮಹದೇವ ರವರು ಶಿಕ್ಷಕರಾದ ಶ್ರೀಯುತ ಸಿ.ಎಸ್.ರಾಜು, ಡಿ ಶಿವಕುಮಾರ್ , ಎಲ್ ಈ ಮಂಜುನಾಥ್ ಅತಿಥಿ ಶಿಕ್ಷಕರುಗಳಾದ ಸಾಗರ್ ಹಾಗೂ ಜಬೀನಾಭಾನು ಪ್ರಥಮದರ್ಜೆ ಸಹಾಯಕರಾದ ಹರೀಶ್ ಕಛೇರಿ ಸಹಾಯಕರಾದ ದಯಾನಂದ ಕುಮಾರ್ ಉಪಸ್ಥಿತರಿದ್ದ ಕಾರ್ಯಕ್ರಮದಲ್ಲಿ ಡಿ ಶಿವಕುಮಾರ್ ಎಲ್ಲರನ್ನೂ ಆತ್ಮೀಯವಾಗಿ ಸ್ವಾಗತಿಸಿದರು ಎಲ್ ಈ ಮಂಜುನಾಥ್ ರವರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಕಳೆದ ವರ್ಷದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮುಂದಿನ ವರ್ಷದ ಪ್ರತಿಭಾ ಪುರಸ್ಕಾರಕ್ಕೆ ನಾನೇ ಶಾಲೆಗೆ ಮೊದಲಿಗಳಾಗಿ ಭಾಗವಹಿಸುತ್ತೇನೆ ಎಂದು ವಾಗ್ದಾನ ಮಾಡಿದ್ದ ಪಲ್ಲವಿಯೇ ಈ ವರ್ಷದ ಫಲಿತಾಂಶದಲ್ಲಿ ಮೊದಲಿಗಳಾಗಿ ಅಭಿನಂದನೆ ಸ್ವೀಕರಿಸದ್ದು ವಿಶೇಷವಾಗಿತ್ತು.