🙏🙏 **ಸರ್ಕಾರಿ ಪ್ರೌಢಶಾಲೆ ಅಂಕನಹಳ್ಳಿಯ ಶೈಕ್ಷಣಿಕ ಜಾಲತಾಣಕ್ಕೆ ಆತ್ಮೀಯ ಸ್ವಾಗತ.**🙏🙏

Monday, 12 December 2022

ಅಜ್ಜಿ ಇಲ್ಲದ ಮನೆ,ಮಜ್ಜಿಗೆ ಇಲ್ಲದ ಊಟ...........


 

                      ಶ್ರೀ ಮತಿ ಸುನೀತ ಮತ್ತು ಶ್ರೀಗುರುದೇವನೂರು 

ಹೌದು ಅಜ್ಜಿ ಇಲ್ಲದ ಮನೆ,ಮಜ್ಜಿಗೆ ಇಲ್ಲದ ಊಟ ಎರಡೂ ಅಪೂರ್ಣ..ಆದರೆ ನಮ್ಮ ಶಾಲೆಯಲ್ಲಿ ಮಕ್ಕಳಿಗೆ ಅಜ್ಜಿಯ ಕಥೆಗಳನ್ನು ತಂತ್ರ ಜ್ಞಾನದಿಂದ ಒದಗಿಸಿಕೊಟ್ಟರೆ, ಮಜ್ಜಿಗೆಯನ್ನು ಕಳೆದ ವರ್ಷದಿಂದ ಉಚಿತವಾಗಿ ಒದಗಿಸಿಕೊಡುವ ಮೂಲಕ ಮೇಲಿನ ಗಾದೆಗೆ ಒಂದು ಅರ್ಥ ಬರುವಂತೆ ಮಾಡಿದ್ದಾರೆ ದಾನಿಗಳಾದ ಶ್ರೀಮತಿ ಸುನೀತ ಮತ್ತು ಶ್ರೀ ಗುರುದೇವನೂರುರವರು.

ಶ್ರೀಮತಿ ಸುನೀತ ಮತ್ತು ಶ್ರೀ ಗುರುದೇವನೂರುರವರು ಕಳೆದ (2021-22 )ಸಾಲಿನಿಂದಲೂನಮ್ಮ ಶಾಲೆಯ ಅಕ್ಷರ ದಾಸೋಹ ಕಾರ್ಯಕ್ರಮಕ್ಕೆ ಪೂರಕವಾಗಿ ಶಾಲೆಯ ಎಲ್ಲಾ ಮಕ್ಕಳಿಗೂ ಸಾಕಾಗುವಷ್ಟು ಶುದ್ಧ ಮೊಸರನ್ನು ಪ್ರತಿದಿನ ಒದಗಿಸುತ್ತಿದ್ದಾರೆ. ಅದನ್ನು ಮಜ್ಜಿಗೆ ರೂಪದಲ್ಲಿ ಪರಿವರ್ತಿಸಿ  ಮದ್ಯಾಹ್ನದ ಬಿಸಿಯೂಟ ಸಮಯದಲ್ಲಿ ಪ್ರತಿ ಮಗುವಿಗೂ ಬಡಿಸಲಾಗುತ್ತಿದೆ.ಇದರಿಂದ ಮಕ್ಕಳ ಆರೋಗ್ಯವರ್ಧನೆಗೂ ಸಹಕಾರಿಯಾಗುತ್ತಿದೆ.

ಬಲಗೈಲಿ ಕೊಟ್ಟಿದ್ದು ಎಡಗೈಗೆ ತಿಳಿಯಬಾರದು ಎಂಬಂತೆ ಸುಪ್ತವಾಗಿರುವ ದಾನಿಗಳಾದ ಶ್ರೀಮತಿ ಸುನೀತ ಮತ್ತು ಗುರುದೇವನೂರುರವರಿಗೆ ಶಾಲೆಯ ಮುಖ್ಯಶಿಕ್ಷಕರು, ಶಿಕ್ಷಕ ಮತ್ತು ಸಿಬ್ಬಂದಿ ವರ್ಗ ,ಎಸ್.ಡಿ.ಎಂ.ಸಿ. ಹಾಗೂ ವಿದ್ಯಾರ್ಥಿವೃಂದದ ಪರವಾಗಿ ಧನ್ಯವಾದಗಳನ್ನು ಸಮರ್ಪಿಸುತ್ತಿದ್ದೇವೆ.




No comments:

ನಿಮ್ಮ ಸಾಮರ್ಥ್ಯದ ಮೇಲೆ ನಿಮಗೆ ನಂಬಿಕೆಯಿರಲಿ.

ಪ್ರತಿಭಾ ಪುರಸ್ಕಾರ 2024-25 (2023-24 ನೆಯ ಸಾಲಿನ SSLC ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಅಭಿನಂದನೆ ) ದಿನಾಂಕ 13-07-2024 ರ ಶನಿವಾರದಂದು ಶಾಲೆ...